60 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಗೆಳೆಯನ ಕಾರಿನಿಂದ ಜಿಗಿದ ಮಹಿಳೆ-ಮುಂದೆ ನಡೆದಿದ್ದು ರೋಚಕ

ತೈನಾನ್: ಗೆಳೆಯನೊಂದಿಗೆ ಜಗಳ ಮಾಡಿಕೊಂಡು ಚಲಿಸುತ್ತಿರುವ ಕಾರಿನಿಂದ ಪತ್ನಿ ಜಿಗಿದಿರುವ ಘಟನೆ ನೈರುತ್ಯ ತೈವಾನ್ ದೇಶದ ತೈನಾನ್ ನಗರದಲ್ಲಿ ನಡೆದಿದೆ.

ಈ ಘಟನೆ ಮಧ್ಯಾಹ್ನ 2 ಗಂಟೆಗೆ ಕ್ಷಿನಿಯಿಂಗ್ ಜಿಲ್ಲೆಯಲ್ಲಿ ನಡೆದಿದ್ದು, ಮಹಿಳೆ ಕಾರಿನಿಂದ ಜಿಗಿಯುವ ಎಲ್ಲ ದೃಶ್ಯಗಳು ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ದಂಪತಿ ಕಾರಿನಲ್ಲಿ ಪ್ರಯಾಣಿಸುವಾಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಮಹಿಳೆ ಕಾರು ನಿಲ್ಲುವರೆಗೂ ಕಾಯದೇ ಬಾಗಿಲು ತೆರೆದು ಇಳಿಯಲು ಪ್ರಯತ್ನಿಸಿದ್ದು, ಕಾರು ಒನ್ ವೇ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಣ ಹಿಂದೆ ಬರುತ್ತಿರುವ ವಾಹನಗಳು ಆಕೆಯ ಹರಿಯುವ ಸಾಧ್ಯತೆಗಳಿದ್ದವು.

ಮಹಿಳೆ ಕಾರಿನಿಂದ ಇಳಿಯುವ ಪ್ರಯತ್ನ ಮಾಡುತ್ತಿದ್ದ ಆಕೆಯ ಗೆಳೆಯ ಕಾರನ್ನು ರಸ್ತೆಯ ಒಂದು ಬದಿಗೆ ತಂದ ಕಾರಣ ಯಾವುದೇ ಅಪಾಯವಾಗಲಿಲ್ಲ. ಈ ಘಟನೆ ನಡೆಯುವಾಗ ಕಾರು ಗಂಟೆಗೆ 60 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು ಎಂದು ವರದಿಯಾಗಿದೆ.

ಕಾರು ಚಲಿಸುತ್ತಿದ್ದಂತೆ ಬದಿಯ ಬಾಗಿಲು ತೆರೆದುಕೊಳ್ಳುತ್ತದೆ. ಕಾರಿನಿಂದ ಹೊರ ಬಂದ ಮಹಿಳೆ ಭಯಬೀತಳಾಗಿ ಡೋರನ್ನು ಆಸರೆಯಾಗಿ ಹಿಡಿದುಕೊಂಡು ನೇತಾಡುವುದನ್ನು ಕಾಣಬಹುದು. ಕಾರು ಸ್ವಲ್ಪ ಮುಂದೆ ಚಲಿಸಿದ ಕೂಡಲೇ ಮಹಿಳೆ ಹಾರಿದ್ದು, ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಪೊಲೀಸರ ಮುಂದೆ ತಾನಾಗಿಯೇ ಕೋಪಗೊಂಡು ಕಾರಿನಿಂದ ಹೊರ ಜಿಗಿಯುವ ಪ್ರಯತ್ನ ಮಾಡಿದ್ದೇನೆ ಎಂದು ಮಹಿಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ ಇಬ್ಬರ ಜಗಳವನ್ನು ಬಗೆಹರಿಸಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

https://www.youtube.com/watch?v=rpRDuCG3yhE

Comments

Leave a Reply

Your email address will not be published. Required fields are marked *