ಶಶಿ ತರೂರ್ ಮುಖಕ್ಕೆ ಮಸಿ ಬಳಿದವರಿಗೆ ನಗದು ಬಹುಮಾನ ಘೋಷಿಸಿದ ಅಲಿಗಢ್ ಮುಸ್ಲಿಂ ಯುವ ನಾಯಕ

ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಬಿಜೆಪಿ ವಿರುದ್ಧ `ಹಿಂದೂ ಪಾಕಿಸ್ತಾನ’ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಹಿನ್ನೆಲೆ ಅಲಿಗಢ್ ನ ಮುಸ್ಲಿಂ ಯುವ ಸಂಘಟನೆಯ ಅಧ್ಯಕ್ಷ ಮೊಹಮದ್ ಅಮೀರ್ ರಶೀದ್, ಶಶಿ ತರೂರ್ ಮುಖಕ್ಕೆ ಯಾರು ಕಪ್ಪು ಮಸಿ ಹಚ್ಚುವವರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ತಿರುವನಂತಪುರಂ ನಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಶಿ ತರೂರ್, 2019ರ ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದರೇ ಭಾರತ ಹಿಂದೂ ಪಾಕಿಸ್ತಾನ ಆಗಲಿದೆ ಎಂದು ಹೇಳಿದ್ದರು. ಬಳಿಕ ತರೂರ್ ಹೇಳಿಕೆಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿತ್ತು, ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಯುವ ನಾಯಕ ಮೊಹಮದ್ ಅಮೀರ್ ರಶೀದ್, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಬೇಜವಾಬ್ದಾರಿ ಹೇಳಿಕೆ ಕೊಟ್ಟಿರುವುದು ಕೇವಲ ಹಿಂದೂಗಳಿಗೆ ಮಾತ್ರವಲ್ಲ ದೇಶಪ್ರೇಮಿಗಳಾದ ಮುಸ್ಲಿಂ ಪ್ರಜೆಗಳಿಗೂ ನೋವು ಉಂಟುಮಾಡಿದೆ. ಭಾರತದಲ್ಲಿ ಒಂದಾಗಿ ವಾಸಿಸುತ್ತಿರುವ ಹಿಂದೂ ಮತ್ತು ಮುಸ್ಲಿಂ ಧರ್ಮದವರನ್ನು ಬೇರೆ ಮಾಡುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ.

ಭಾರತವು ಬಿಜೆಪಿ ಸಾರಥ್ಯದಲ್ಲಿ ಪ್ರಗತಿ ಕಾಣುತ್ತಿರುವುದನ್ನು ಕಾಂಗ್ರೆಸ್‍ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಅದಕ್ಕಾಗಿ ಅಧಿಕಾರ ಪಡೆಯಲು ಯಾವ ಮಟ್ಟಕ್ಕಾದರು ಇಳಿಯಲು ಕಾಂಗ್ರೆಸ್ ನಾಯಕರು ಸಿದ್ಧರಿದ್ದಾರೆ. ಅದ್ದರಿಂದ ಶಶಿ ತರೂರ್ ಮುಖಕ್ಕೆ ಯಾರು ಮಸಿ ಹಚ್ಚುತ್ತಾರೋ ಅವರಿಗೆ 11 ಸಾವಿರ ರೂ.ಗಳು ಬಹುಮಾನ ನೀಡಲಾಗುತ್ತದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತರೂರ್ ಅವರ ಟೀಕೆಗಳಿಂದ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡದೆ ದೂರವುಳಿದಿದೆ. ಸದ್ಯ ಇಂತಹ ಹೇಳಿಕೆಗಳ ಮೂಲಕ ಆಡಳಿತ ಪಕ್ಷದ ವಿರೋಧವನ್ನು ಅವರು ಎದುರಿಸುತ್ತಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ವಿವಾದಾತ್ಮಕ ಹೇಳಿಕೆ ಮತ್ತು ಪ್ರತಿಕ್ರಿಯೆ ನೀಡುವುದರ ಬಗ್ಗೆ ಎಚ್ಚೆರಿಕೆ ನೀಡಲಾಗುವುದು ಎಂದು ಕಾಂಗ್ರೆಸ್ ತನ್ನ ಸದಸ್ಯರಿಗೆ ಸೂಚನೆ ನೀಡಿದೆ.

ತರೂರ್ ಅವರ ಹೇಳಿಕೆ ಭಾರತದ ಪ್ರಜಾಪ್ರಭುತ್ವ ಹಾಗೂ ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *