ನನ್ನ ಮತ್ತು ಮೈಕಲ್ ಕ್ಲಾರ್ಕ್ ಸಂಬಂಧ ಕೆಡಲು ಐಪಿಎಲ್ ಕಾರಣ: ಸೈಮಂಡ್ಸ್

ಸಿಡ್ನಿ: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಮತ್ತು ನನ್ನ ನಡುವಿನ ಸ್ನೇಹ ಕೆಡಲು ಐಪಿಎಲ್ ಪ್ರಮುಖ ಕಾರಣ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‍ರೌಂಡರ್ ಆಟಗಾರ ಆಂಡ್ರ್ಯೂ ಸೈಮಂಡ್ಸ್ ಆರೋಪಿಸಿದ್ದಾರೆ.

ಬ್ರೆಟ್ ಲೀ ಪಾಡ್‍ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2008ರಲ್ಲಿ ಐಪಿಎಲ್ ಪ್ರಾರಂಭಗೊಂಡಾಗ ಡೆಕ್ಕನ್ ಚಾರ್ಜರ್ಸ್ ತಂಡ ನನ್ನನ್ನು 5.4 ಕೋಟಿ ರೂ. ನೀಡಿ ಖರೀದಿಸಿತು. ಆದರೆ ಮೈಕಲ್ ಕಾರ್ಕ್ ಅನ್‍ಸೋಲ್ಡ್ ಆಟಗಾರನಾಗಿದ್ದರು. ಇದರಿಂದ ರಾಷ್ಟ್ರೀಯ ತಂಡಕ್ಕೆ ಆಡಲು ಮುಂದಾದಾಗ ಮೈಕಲ್ ಕಾರ್ಕ್‍ಗೆ ನನ್ನ ಮೇಲೆ ಅಸೂಯೆ ಹುಟ್ಟಿಕೊಂಡು ನಮ್ಮಿಬ್ಬರ ಸ್ನೇಹ ಮುರಿದು ಬಿತ್ತು ಇದಕ್ಕೆಲ್ಲ ಕಾರಣ ಐಪಿಎಲ್‍ನ ಹಣ ಎಂದು ದೂರಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ಹಾರಾಟ – ಹೋರಾಟವಿಲ್ಲದೆ ಸೋತ ಆರ್‌ಸಿಬಿ

ರಾಷ್ಟ್ರೀಯ ತಂಡದಲ್ಲಿದ್ದಾಗ ಕಾರ್ಕ್ ಮತ್ತು ನಾನು ಉತ್ತಮ ಸ್ನೇಹಿತರಾಗಿದ್ದೇವು. 2008ರ ಬಳಿಕ ನಮ್ಮ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ ಬಳಿಕ ರಾಷ್ಟ್ರೀಯ ತಂಡಕ್ಕಾಗಿ ಒಟ್ಟಿಗೆ ಆಡುವಾಗ ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನೋ ಬಾಲ್ ವಿವಾದದ ನಡುವೆ ಕುಲ್ಚಾ ಜೋಡಿಯ ಕೀಟ್ಲೆ

2015ರಲ್ಲಿ ಸೈಮಂಡ್ಸ್, ಕಾರ್ಕ್ ನಾಯಕತ್ವದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಕಾರ್ಕ್, ಸೈಮಂಡ್ಸ್ ಕುಡಿದು ಮೈದಾನಕ್ಕಿಳಿಯುತ್ತಾರೆ ಎಂಬ ಆಪಾದನೆ ಹೊರಿಸಿದ್ದರು. ಬಳಿಕ ಸೈಮಂಡ್ಸ್ 2012ರಲ್ಲಿ ಮತ್ತು ಕಾರ್ಕ್ 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು.

Comments

Leave a Reply

Your email address will not be published. Required fields are marked *