ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

ಹೈದರಾಬಾದ್: ಟ್ರಾಫಿಕ್ ಪೊಲೀಸ್ ಪ್ರವಾಹದಲ್ಲಿ ಸಿಲುಕಿದ್ದ ಅರ್ಚಕರೊಬ್ಬರನ್ನು ರಕ್ಷಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೀರೋ ಎಂದು ಪ್ರಶಂಸಿಸುತ್ತಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ಕೊಡವಲೂರು ಶಿವ ದೇವಸ್ಥಾನದ ಅರ್ಚಕರು ವೆಂಕಟೇಶ್ವರಪುರಂ ಸೇತುವೆ ಮೇಲೆ ಬೈಕ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಪ್ರವಾಹದ ನೀರಿನ ಸೆಳೆತಕ್ಕೆ ಅರ್ಚಕರು ಕೊಚ್ಚಿಹೋಗುವ ವೇಳೆ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಇದನ್ನೂ ಓದಿ: ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ವಂಚನೆ

ಈ ವೇಳೆ ಅಲ್ಲೇ ಇದ್ದ ಕರ್ತವ್ಯ ನಿರತ ಟ್ರಾಫಿಕ್ ಸರ್ಕಲ್ ಇನ್ಸ್ ಪೆಕ್ಟರ್ ನಾಯಕ್ ಅವರು ಅರ್ಚಕರನ್ನು ರಕ್ಷಿಸಲು ಮುಂದಾಗುತ್ತಾರೆ. ನಾಯಕ್ ಅವರು ಹಗ್ಗವನ್ನು ಬಳಸಿ ಅರ್ಚಕರು ಇರುವ ಸ್ಥಳಕ್ಕೆ ತಲುಪಿ ನಂತರ ಅವರು ಅರ್ಚಕರನ್ನು ಬಿಗಿಯಾಗಿ ಹಿಡಿದುಕೊಂಡು ಸುರಕ್ಷಿತವಾಗಿ ದಡ ಮುಟ್ಟಿಸುತ್ತಾರೆ.

ನಾಯಕ್ ಅವರ ಸಾಹಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ನೆಲ್ಲೂರು ಜಿಲ್ಲೆಯ ಕೊಡವಲೂರು ಶಿವ ದೇವಾಲಯದಲ್ಲಿ ಕೆಲಸ ಮಾಡುವ ಅರ್ಚಕರೊಬ್ಬರು ವೆಂಕಟೇಶ್ವರಪುರಂ ಸೇತುವೆಯ ಬಳಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅವರು ಪ್ರವಾಹದ ನೀರಿನಿಂದ ಕೊಚ್ಚಿಹೋಗುತ್ತಿದ್ದರು. ಆಗ ಸಮಯಕ್ಕೆ ಸರಿಯಾಗಿ ಧೈರ್ಯ ಮಾಡಿದ ಟ್ರಾಫಿಕ್ ಸಿಐ ನಾಯಕ್ ಅವರು ಸುರಕ್ಷಿತವಾಗಿ ಕರೆತಂದಿದ್ದಾರೆ ಎಂದು ಬರೆದು ಟ್ವೀಟ್ ಮಾಡಲಾಗಿದೆ.

ಈ ವೀಡಿಯೋ ವೈರಲ್ ಆಗಿದ್ದು ಟ್ರಾಫಿಕ್ ಪೊಲೀಸ್ ಸಾಹಸವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಗೌತಮ್ ಸವಾಂಗ್ ಈ ಕುರಿತು, ಸಾರ್ವಜನಿಕ ಸೇವೆಯಲ್ಲಿ ಮತ್ತು ವ್ಯಕ್ತಿಯ ಜೀವ ಉಳಿಸುವಲ್ಲಿ ಟ್ರಾಫಿಕ್ ಸಿಐ ಅವರು ತೋರಿದ ಶೌರ್ಯ ರಕ್ಷಣೆ ಮತ್ತು ಬದ್ಧತೆಯನ್ನು ಟ್ವೀಟ್ ಮಾಡಿ ಪ್ರಶಂಸಿದ್ದಾರೆ. ಇದನ್ನೂ ಓದಿ:  100 ರೂ. ನೋಟ್ ಒಳಗೆ ವೈಟ್ ಪೇಪರ್ ಇಟ್ಟು ವಂಚನೆ- ಐವರು ಅರೆಸ್ಟ್

Comments

Leave a Reply

Your email address will not be published. Required fields are marked *