ಫೇಸ್‍ಬುಕ್ ಗೆಳತಿಗಾಗಿ ಗುಡಿ ಕಟ್ಟಿಸಿ ಪ್ರೇಮ ಪೂಜಾರಿಯಾದ ಟೆಕ್ಕಿ

– ಪ್ರೇಮಿಯ ಮನೆಯಿಂದಲೇ ಬಂದ ಗೆಳತಿಯ ಪ್ರತಿಮೆ
– ಮನೆಯ ಮೇಲೆ ಪ್ರೇಮ ಗುಡಿ ಕಟ್ಟಿದ ಯುವಕ

ಹೈದರಾಬಾದ್: ರಾಜಕೀಯ ನಾಯಕರು ಅಥವಾ ಜನ್ಮ ನೀಡಿದ ತಂದೆ-ತಾಯಿಯ ಪ್ರತಿಮೆಯನ್ನು ಪತಿಷ್ಠಾಪನೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಆಂಧ್ರಪ್ರದೇಶದ ಯುವಕನೊಬ್ಬ ಫೇಸ್‍ಬುಕ್ ಗೆಳತಿಯ ನೆನಪಿಗಾಗಿ ಗುಡಿ ಕಟ್ಟಿಸಿ, ಪೂಜಾರಿಯಾಗಿದ್ದಾರೆ.

ವಿಜಯನಗರಂ ಜಿಲ್ಲೆಯ ಜಾಮಿ ಗ್ರಾಮದ ಯುವಕ ಎರ್ನಿಬಾಬು ಪ್ರೇಮ ಗುಡಿ ಕಟ್ಟಿ, ಗೆಳತಿಯ ಪ್ರತಿಮೆ ಪ್ರತಿಷ್ಠಾಪಿಸಿ ಪ್ರೇಮಿ. ವೃತ್ತಿಯಿಂದ ಇಲೆಕ್ಟ್ರಿಕಲ್ ಮೆಕಾನಿಕ್ ಆಗಿರುವ ಎರ್ನಿಬಾಬುಗೆ ಫೇಸ್‍ಬುಕ್‍ನಲ್ಲಿ ಯುವತಿ ಪರಿಚಯವಾಗಿದ್ದಳು. ಬಳಿಕ ಯುವತಿಯ ಫೋನ್ ನಂಬರ್ ಪಡೆದ ಆಕೆಯ ಜೊತೆಗೆ ಚಾಟಿಂಗ್ ಮಾಡುತ್ತಿದ್ದ.

ಈ ಪರಿಚಯ ಸ್ನೇಹವಾಗಿ ಬದಲಾಗಿತ್ತು. ಬಳಿಕ ಒಬ್ಬರು ಹೈದರಾಬಾದ್‍ನಲ್ಲಿ ಎರಡು ಬಾರಿ ಭೇಟಿಯಾಗಿ, ಪ್ರೇಮ ಪ್ರಸ್ತಾಪ ಮಾಡಿದ್ದರು. ಆದರೆ ಕಳೆದ ವರ್ಷ ಅನಾರೋಗ್ಯದಿಂದ ಯುವತಿ ಮೃತಪಟ್ಟಿದ್ದಳು. ಈ ಆಘಾತದಿಂದ ಎರ್ನಿಬಾಬು ಹೊರ ಬರಲು ಭಾರೀ ಕಷ್ಟಪಡುತ್ತಿದ್ದಾನೆ. ಪ್ರೇಮಿಯ ನೆನಪಿನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದ. ಮಗನ ನಡೆಯಿಂದಾಗಿ ಪೋಷಕರು ನೊಂದುಕೊಂಡಿದ್ದರು.

ಗೆಳತಿಯು ಆಗಾಗ ನನ್ನ ಕನಸಿನಲ್ಲಿ ಬರುತ್ತಾಳೆ ಎಂದು ಎರ್ನಿಬಾಬು ಸ್ನೇಹಿತರ ಮುಂದೆ ಹೇಳಿಕೊಂಡಿದ್ದ. ಹೀಗಾಗಿ ಪೋಷಕರ ಒಪ್ಪಿಗೆ ಪಡೆದು, ಮನೆಯ ಮೇಲೆ ಪ್ರೇಮ ಗುಡಿ ನಿರ್ಮಿಸಿದ್ದಾನೆ. ಈ ವಿಚಾರ ತಿಳಿದ ಯುವತಿಯ ಪೋಷಕರು ತಮ್ಮ ಪುತ್ರಿಯ ವಿಗ್ರಹವನ್ನು ಜಾಮಿ ಗ್ರಾಮಕ್ಕೆ ಕಳುಹಿಸಿದ್ದಾರೆ. ಎರ್ನಿಬಾಬು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗೆಳತಿಯ ವಿಗ್ರಹವನ್ನು ಅದ್ಧೂರಿ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಿದ್ದಾನೆ. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ, ಗ್ರಾಮದ 300ಕ್ಕೂ ಅಧಿಕ ಜನರಿಗೆ ಅನ್ನ ಸಂತರ್ಪನೆ ನೆರವೇರಿಸಿದ್ದಾನೆ.

Comments

Leave a Reply

Your email address will not be published. Required fields are marked *