ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಗ್ಯಾಂಗ್ ಅರೆಸ್ಟ್

ಅಮರಾವತಿ: 30 ಕ್ಕೂ ಹೆಚ್ಚು ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗ್ಯಾಂಗ್‍ವೊಂದನ್ನು ನಾಲ್ಕು ತಿಂಗಳ ಸುದೀರ್ಘ ತನಿಖೆಯ ನಂತರ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೊಲೀಸರು ಬಂಧಿಸಿ ಯಶಸ್ವಿಯಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಗುಂಟೂರಿನಲ್ಲಿ ಬೀಡುಬಿಟ್ಟಿದ್ದ ಗ್ಯಾಂಗ್‍ವೊಂದು ಸರಗಳ್ಳತನ, ಅತ್ಯಾಚಾರ ಎಸಗುತ್ತಿತ್ತು. ಸೆಪ್ಟೆಂಬರ್‍ನಲ್ಲಿ ಈ ಗ್ಯಾಂಗ್ ದಂಪತಿ ಮೇಲೆ ದಾಳಿ ನಡೆಸಿದ್ದು, ಪತಿ ಮೇಲೆ ಹಲ್ಲೆ ನಡೆಸಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಇದೇ ತರಹದ ಘಟನೆಗಳಲ್ಲಿ ಇಬ್ಬರು ದಂಪತಿ ಮೇಲೆ ಈ ರೀತಿ ದಾಳಿ ಮಾಡಿ ದರೋಡೆ ಮಾಡಿದ್ದರು. ಈ ಹಿಂದೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಓರ್ವ ಯುವಕನ ಮೇಲೆ ಇವರು ಹಲ್ಲೆ ನಡೆಸಿದ್ದು, ಅವನ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದರು. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

ಪೊಲೀಸರು ಬೆರಳಚ್ಚುಗಳ ಆಧಾರದ ಮೇಲೆ ಗ್ಯಾಂಗ್‍ನಲ್ಲಿರುವವರನ್ನು ಗುರುತಿಸಿದ್ದು, ಅವರನ್ನು ಕರ್ನೂಲ್‍ನ ಪಾಣ್ಯಂ ಪ್ರದೇಶದಲ್ಲಿ ಪತ್ತೆ ಮಾಡಲಾಯಿತು. ಇದುವರೆಗೆ ಯಾವುದೇ ಸುಳಿವುಗಳಿಲ್ಲದ ಕಠಿಣ ಪ್ರಕರಣವಾಗಿದ್ದು, ನಾವು ಎಡ್ಲಪಾಡು ದರೋಡೆ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ. ಮೆಡಿಕೊಂಡೂರು ನಗರ ಜಿಲ್ಲೆಯ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಭೇದಿಸಲು ಇದು ಸಾಧ್ಯವಾಗಿದೆ. ಗ್ಯಾಂಗ್‍ನ ಆರು ಜನ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಇಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಗುಂಟೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಗುನ್ನಿ ತಿಳಿಸಿದರು. ಇದನ್ನೂ ಓದಿ: ರಾಜ್ಯದ ಕೋವಿಡ್ ವಾರ್ ರೂಮ್​ಗೆ ರಾಷ್ಟ್ರ ಪ್ರಶಸ್ತಿ

Comments

Leave a Reply

Your email address will not be published. Required fields are marked *