ಲವ್ ಮುಂದುವರೆಸಲು ನಿರಾಕರಿಸಿದ್ದಕ್ಕೆ ಪ್ರೇಯಸಿಯ ಮೇಲೆ ಲೈಂಗಿಕ ದೌರ್ಜನ್ಯ -ಗೆಳೆಯರಿಂದ ವಿಡಿಯೋ ಮಾಡಿಸ್ದ

ಹೈದರಾಬಾದ್: ರಿಲೇಷನ್‍ಶಿಪ್ ಮುಂದುವರೆಸಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ತನ್ನ ಪ್ರೇಯಸಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅದನ್ನ ಗೆಳೆಯರಿಂದ ವಿಡಿಯೋ ಮಾಡಿಸಿದ್ದು, ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ ನಲ್ಲಿ ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಮಾಡಿದ ಸ್ನೇಹಿತರು ಸೇರಿದಂತೆ ಪ್ರಮುಖ ಆರೋಪಿ ಸಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ಹಾಗೂ ಆರೋಪಿ ಸಾಯಿ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಇತ್ತೀಚೆಗೆ ಯುವತಿ ಸಾಯಿಯನ್ನು ಅವಾಯ್ಡ್ ಮಾಡುತ್ತಿದ್ದಳು. ಪ್ರೇಮವನ್ನು ಮುಂದುವರೆಸಲು ನಿರಾಕರಿಸಿದ್ದಳು. ಹೀಗಾಗಿ ಸಾಯಿ ಆಕೆಗೆ ಪಾಠ ಕಲಿಸಬೇಕೆಂದು ತನ್ನ ಸ್ನೇಹಿತರ ಜೊತೆಗೂಡಿ ಲೈಂಗಿಕ ದೌರ್ಜನ್ಯವೆಸಗುವ ಪ್ಲ್ಯಾನ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಯುವಕರು ಯುವತಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ ಕರೆದುಕೊಂಡು ಹೋಗಿದ್ದರು. ಅದ್ರೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಾಯಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ವೇಳೆ ಮತ್ತೊಬ್ಬ ಯುವತಿಯೂ ಅಲ್ಲಿದ್ದು, ತನ್ನ ಗೆಳತಿಯನ್ನ ರಕ್ಷಿಸಲು ಯತ್ನಿಸಿ ವಿಫಲಳಾಗಿದ್ದಾಳೆ.

ಸಂತ್ರಸ್ತ ಯುವತಿ ಅಳುತ್ತಾ ಅಂಗಲಾಚುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನ ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿತ್ತು. ವಿಡಿಯೋ ನೋಡಿದ ಕನಿಗಿರಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಸಂತ್ರಸ್ತ ಯುವತಿಯನ್ನು ಪತ್ತೆ ಮಾಡಿದ ಪೊಲೀಸರು ಆಕೆಯನ್ನ ಸಂಪರ್ಕಿಸಿ, ಆಕೆಗೆ ಹಾಗೂ ಪೋಷಕರಿಗೆ ದೂರು ದಾಖಲಿಸುವಂತೆ ಹೇಳಿದ್ದರು.

ಪ್ರಮುಖ ಆರೋಪಿ ಸಾಯಿ ಬಿಎಸ್‍ಸಿ ಕೃಷಿ ಓದುತ್ತಿದ್ದು, ಮತ್ತೊಬ್ಬ ಆರೋಪಿ ಕಾರ್ತಿಕ್ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಾನೆ. ಮೂರನೇ ಆರೋಪಿ ಪವನ್ ಪೊಲೀಸ್ ಕಾನ್ಸ್ ಟೇಬಲ್‍ವೊಬ್ಬರ ಮಗ ಎಂದು ವರದಿಯಾಗಿದೆ. ಎಲ್ಲಾ ಮೂವರು ಆರೋಪಿಗಳ ವಿರುದ್ಧ ನಿರ್ಭಯಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಮೂರು ದಿನಗಳ ಹಿಂದೆ ನಮಗೆ ಈ ಘಟನೆ ಬಗ್ಗೆ ತಿಳಿಯಿತು. ನಂತರ ನಾವು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಿದ್ದೇವೆ. ಶಿಕ್ಷಕರು ಹಾಗೂ ಪೋಷಕರಿಗೆ ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಕಣ್ಣಿಡುವಂತೆ ಮನವಿ ಮಾಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

https://www.youtube.com/watch?v=p0Td9z0QsiE

Comments

Leave a Reply

Your email address will not be published. Required fields are marked *