ಬ್ಯಾಟ್‍ಗಳ ಫೋಟೋ ಅಪ್ಲೋಡ್ – ಟ್ರೋಲ್ ಮಾಡಿ ವಾರ್ನರ್ ಕಾಲೆಳೆದ ಕೊಹ್ಲಿ

ಬೆಂಗಳೂರು: ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ರೋಲ್ ಮಾಡಿದ್ದಾರೆ.

ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಇಬ್ಬರು ಉತ್ತಮ ಸ್ನೇಹಿತರು. ವಾರ್ನರ್ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಬ್ಯಾಟ್‍ಗಳ ಸಂಗ್ರಹ ಇರುವ ಫೋಟೋವನ್ನು ಶನಿವಾರ ಪೋಸ್ಟ್ ಮಾಡಿದ್ದರು.

 

 

View this post on Instagram

 

Stock-taking time!! @spartansportsau #needafewmore ????????

A post shared by David Warner (@davidwarner31) on

ಈ ಪೋಸ್ಟ್ ಗೆ ಕೊಹ್ಲಿ, “ಇಷ್ಟು ಇದ್ದರೂ ನನ್ನ ಬಳಿ ಇರುವ ಬ್ಯಾಟ್ ಬೇಕು ಅಲ್ವಾ” ಎಂದು ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ಇದಕ್ಕೆ ವಾರ್ನರ್ ಆರಂಭದಲ್ಲಿ ನಗುವ ಇಮೋಜಿ ಹಾಕಿ, “ಕೇವಲ ಒಂದೇ ಬ್ಯಾಟ್ ಅಷ್ಟೇ” ಎಂದು ಉತ್ತರಿಸಿದ್ದಾರೆ.

ಡೇವಿಡ್ ವಾರ್ನರ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ನಲ್ಲಿ ಆಡುತ್ತಿದ್ದರೆ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಕೊಹ್ಲಿ 45 ರನ್ ಹೊಡೆದಿದ್ದರೆ ಇಂದು ನಡೆದ ಪಂದ್ಯದಲ್ಲಿ 11 ರನ್ ಗಳಿಸಿ ಔಟಾದರು. ಇಂದು ಶಿವಂ ದುಬೆ ಎಸೆತದಲ್ಲಿ ಕೊಹ್ಲಿ ಡೈವ್ ಮಾಡಿ ಕಾಲಿನ್ ಮನ್ರೋ ಅವರ ಕ್ಯಾಚ್ ಹಿಡಿದಿದ್ದರು.

Comments

Leave a Reply

Your email address will not be published. Required fields are marked *