ಪ್ಯಾಂಟ್ ಧರಿಸದೇ ರಸ್ತೆಗಿಳಿದ ನಿರೂಪಕಿಗೆ ನೆಟ್ಟಿಗರಿಂದ ಕ್ಲಾಸ್

ತೆಲುಗಿನ ಸಿನಿಮಾ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಮೂಲಕ ಗಮನ ಸೆಳೆದಿರುವ ಶ್ರವಂತಿ ಚೋಕಾರವು (Sravanthi Chokarapu) ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ಯಾಂಟ್ ಧರಿಸದೇ ರಸ್ತೆಗಳಿದ ಆ್ಯಂಕರ್‌ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಯಶ್ ಹೊಸ ಸಿನಿಮಾದ ಶೂಟಿಂಗ್ ಆರಂಭ ಆಯಿತಾ?

ಯೂಟ್ಯೂಬ್ ಚಾನೆಲ್‌ಗೆ ನಿರೂಪಕಿಯಾಗಿದ್ದ ಶ್ರವಂತಿ, ಮುಂದೆ ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣಗೆ (Rashmika Mandanna) ಸಂದರ್ಶನ ಮಾಡುವ ಮೂಲಕ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಬಳಿಕ ತೆಲುಗು ಬಿಗ್ ಬಾಸ್ ಒಟಿಟಿಗೆ ಸ್ಪರ್ಧಿಯಾಗಿ ಆಫರ್ ಪಡೆಯುತ್ತಾರೆ.

ಸಮಂತಾ ನಟನೆಯ ‘ಶಾಕುಂತಲಂ’ (Shakuntalam) ಸೇರಿದಂತೆ ಹಲವು ಸಿನಿಮಾ ಸಂಬಧಿಸಿದ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾರೆ. ಸದ್ಯ ಶ್ರವಂತಿ ತಮ್ಮ ಡ್ರೆಸ್ ಸೆನ್ಸ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪ್ಯಾಂಟ್ ಧರಿಸದೇ ರಸ್ತೆ ಬಂದಿದ್ದಕ್ಕೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕೆಂಪು ಹಾರ್ಟ್ ಡಿಸೈನ್ ಇರುವ ಬಿಸ್ಕೆಟ್ ಬಣ್ಣದ ಸ್ವೆಟರ್ ಧರಿಸಿರುವ ಶ್ರವಂತಿ ಚೋಕಾರಪು ಪ್ಯಾಂಟ್ ಧರಿಸಿಲ್ಲ. ಮ್ಯಾಜ್ ಆಗುವಂತೆ ಚಪ್ಪಲಿ ಧರಿಸಿದ್ದಾರೆ. ಈ ಡ್ರೆಸ್‌ಗೆ ಬಗೆ ಬಗೆಯ ಕಾಮೆಂಟ್ ಬಂದಿದೆ. ಡ್ರೆಸ್ ಚೆನ್ನಾಗಿದೆ ಪ್ಯಾಂಟ್ ಧರಿಸಬೇಕು, ನಮ್ಮ ಕಣ್ಣನನ್ನು ತಂಪು ಮಾಡುವ ಅಗತ್ಯವಿಲ್ಲ, ಪ್ರಚಾರಕ್ಕಾಗಿ ಹೀಗೆಲ್ಲಾ ಪ್ರಯತ್ನ ಮಾಡಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.