ಮಾಸ್ಟರ್ ಆನಂದ್ ಪತ್ನಿಯ 2 ಕಾಲಿಗೆ ಬ್ಯಾಂಡೇಜ್- ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್

ಟ, ನಿರೂಪಕ ಮಾಸ್ಟರ್ ಆನಂದ್ (Master Anand) ಪತ್ನಿ ಯಶಸ್ವಿನಿ ಕಾಲಿಗೆ ಪೆಟ್ಟಾಗಿದೆ. ಯಶಸ್ವಿನಿ (Yashaswini Anand) ಕಾಲಿನ ಬ್ಯಾಂಡೇಜ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್ ಜೊತೆ ಬರ್ತ್‌ಡೇ ಆಚರಿಸಿದ ರಾಧಿಕಾ ಪಂಡಿತ್

ನನ್ನಮ್ಮ ಸೂಪರ್‌ ಸ್ಟಾರ್‌ ವಿನ್ನರ್ ಯಶಸ್ವಿನಿ ಕಾಲಿಗೆ ಬಿಸಿ ನೀರು ಬಿದ್ದು, ಕಾಲಿಗೆ ಗುಳ್ಳೆ ಆಗಿರುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಮೇಲೆ ಯಾರು ಕಣ್ಣು ಬಿತ್ತೋ ಹೇಗೋ ಎಂದಿರುವ ಯಶಸ್ವಿನಿ ಅವರು ಏನ್ ಆಗತ್ತೋ ಅದು ಒಳ್ಳೆದಕ್ಕೆ ಅನ್ನೋ ಅಡಿಬರಹ ಕೊಟ್ಟಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಮಾರ್ಚ್ 1ರಂದು ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರು ಹಾಟ್ ವಾಟರ್ ಸ್ಟೀಮ್ ತಗೆದುಕೊಳ್ಳುತ್ತಿದ್ದರು. ಆಗ ಬಿಸಿ ನೀರು ತಪ್ಪಿ ಕಾಲಿಗೆ ಬಿದ್ದಿದೆ. ಬಳಿಕ ಸಿಕ್ಕಾಪಟ್ಟೆ ಉರಿ ತಾಳಲಾರದೇ ಆಸ್ಪತ್ರೆಗೆ ಹೋಗಿದ್ದಾರೆ. ಆಗ ಬ್ಯಾಂಡೇಜ್ ಹಾಕಿ ಕಳುಹಿಸಿದ್ದಾರೆ. ಬ್ಯಾಂಡೇಜ್ ಹಾಕಿದ ಬಳಿಕ ಸಿಕ್ಕಾಪಟ್ಟೆ ಕಾಲಿಗೆ ಗುಳ್ಳೆ ಏಳಲು ಪ್ರಾರಂಭಿಸಿದೆ. ಹಾಗಾಗಿ ಮತ್ತೆ ಪತ್ನಿಯನ್ನು ಮಾಸ್ಟರ್‌ ಆನಂದಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕಾಲುಗಳ ಮೇಲೆ ದೊಡ್ಡ ದೊಡ್ಡ ಗುಳ್ಳೆಗಳಾಗಿದ್ದಕ್ಕೆ, ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರು ವಿಶ್ರಾಂತಿಯಲ್ಲಿದ್ದಾರೆ.