ಅನಂತಕುಮಾರ್ ಹೆಗಡೆ ಒಬ್ಬ ಬ್ರಿಟಿಷ್, ಹಿಂದೂಗಳನ್ನು ಡಿವೈಡ್ ಮಾಡಲು ಹೊರಟ್ಟಿದ್ದಾರೆ: ಆಸ್ನೋಟಿಕರ್

ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆಯ ಸಚಿವ ಅನಂತಕುಮಾರ್ ಹೆಗ್ಡೆ ಒಬ್ಬ ಬ್ರಿಟಿಷ್. ಹಿಂದೂಗಳನ್ನು ವಿಭಜನೆ ಮಾಡಲು ಹೊರಟ್ಟಿದ್ದಾರೆ ಎಂದು ಮಾಜಿ ಶಾಸಕ ಆನಂದ್ ಆಸ್ನೋಟಿಕರ್ ಗಂಭೀರ ಆರೋಪವನ್ನ ಮಾಡಿದ್ದಾರೆ.

ಇಂದು ಕಾರವಾರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಸ್ನೋಟಿಕರ್, ರಾಜಕಾರಣದ ಲಾಭ ಪಡೆಯಲು, ಜನರ ಮತ ಪಡೆಯಲು ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯಲು ಅನಂತಕುಮಾರ ಹೆಗಡೆ ತಯಾರಿದ್ದಾರೆ. ಅನಂತ್ ಕುಮಾರ್ ಹೆಗಡೆ ಒಬ್ಬ ನೀಚ ಎನ್ನೋದನ್ನ ಈಗಲೂ ಸಮರ್ಥನೆ ಮಾಡಿಕೊಳ್ಳುತ್ತೆನೆ. ಒಂದು ವೇಳೆ ಕ್ಷಮೆ ಕೇಳಬೇಕೆಂದರೆ ಹಿಂದುಳಿದ ವರ್ಗದ ನಾಯಕ ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಜಿ ನಾಯಕ್ ರವರಲ್ಲಿ ಕೇಳುತ್ತೇನೆ ಆದರೆ ಬಿಜೆಪಿಯವರಲ್ಲಿ ಅಲ್ಲ ಎಂದರು.

ರಾಜ್ಯಕ್ಕೆ ರೆಸಾರ್ಟ್ ರಾಜಕಾರಣವನ್ನ ಪರಿಚಯಿಸಿದವರು ಬಿಜೆಪಿಗರು. ಅದರಲ್ಲಿ ರೆಸಾರ್ಟ್ ರಾಜಕಾರಣದ ಮುಖ್ಯ ರೂವಾರಿಯನ್ನ ಕೇಂದ್ರ ಸಂಸದೀಯ ಸಚಿವ ಅನಂತಕುಮಾರ್ ವಹಿಸಿದ್ದರು. ಅಂದು ಒಂದು ನಯಾ ಪೈಸೆಯನ್ನೂ ಪಡೆದುಕೊಂಡಿಲ್ಲ ಎಂಬುದಾಗಿ ಯಡಿಯೂರಪ್ಪ, ಜನಾರ್ದನ ರೆಡ್ಡಿ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಹೇಳಲಿ ಎಂದು ಬಹಿರಂಗ ಸವಾಲು ಹಾಕಿದರು.

Comments

Leave a Reply

Your email address will not be published. Required fields are marked *