ಕರಾವಳಿ ಸಂಪೂರ್ಣ ದೇಶದ್ರೋಹಿಗಳ ಆಡಂಬರವಾಗುತ್ತಿದೆ: ಅನಂತಕುಮಾರ್ ಹೆಗಡೆ

ಕಾರವಾರ: ಕರಾವಳಿ ಸಂಪೂರ್ಣ ದೇಶದ್ರೋಹಿಗಳ ಆಡಂಬರವಾಗುತ್ತಿದೆ ಎಂದು ಸಂಸದ ಅನಂತಕುಮಾರ್‌ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಇಲ್ಲಿನ ಅಭಿವೃದ್ಧಿಯ ಲಾಭವನ್ನು ದೇಶದ್ರೋಹಿಗಳು ಪಡೆದುಕೊಳ್ಳುತ್ತಾರೆ. ಮಂಗಳೂರು ಸಂಪೂರ್ಣ ನಮ್ಮ ಕೈ ತಪ್ಪಿ ಹೋಗುತ್ತಿದೆ. ಕರಾವಳಿ ಸಂಪೂರ್ಣ ದೇಶದ್ರೋಹಿಗಳ ಆಡಂಬರವಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 46 ವರ್ಷಕ್ಕೆ ನನ್ನ ತಮ್ಮ ದೇವರಿಗೆ ತುಂಬಾ ಇಷ್ಟ ಆಗ್ಬಿಟ್ಟ: ಶಿವಣ್ಣ

ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರಿಗೆ ತಲೆನೋವಾಗಿರುವುದು ಮಂಗಳೂರಿನ ಮೂಲ ನಿವಾಸಿಗಳಲ್ಲ, ಕೇರಳದವರು. ನಮ್ಮ ಊರಿನ ಅಭಿವೃದ್ಧಿ ಲಾಭವನ್ನು ನಾವೇ ಪಡೆದುಕೊಳ್ಳಬೇಕು. ಮಂಗಳೂರಿನ ಅಭಿವೃದ್ಧಿ ಲಾಭವನ್ನು ಕೇರಳದವರು ಪಡೆದುಕೊಳ್ಳುತಿದ್ದಾರೆ. ನಾವು ಬೇರೆಡೆ ಹೋಗಿ ಅಲ್ಪ ಸಂಬಳಕ್ಕೆ ಚಾಕರಿ ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದುಸ್ತಾನ್ ಆರ್ಟ್ ಅಂಡ್ ಕ್ರಾಫ್ಟ್ ಮೇಳಕ್ಕೆ ನ.12 ರಂದು ಚಾಲನೆ

ಇಷ್ಟು ದಿನ ಅಭಿವೃದ್ಧಿ ಬಗ್ಗೆ ಹೇಳುತ್ತಿದ್ದೆವು. ಆದರೇ ಆ ದಿಕ್ಕಿನೆಡೆಗೆ ದಾಪುಗಾಲು ಹಾಕಿರಲಿಲ್ಲ. ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯೆಡೆಗೆ ದಾಪುಗಾಲು ಹಾಕುತ್ತಿದೆ. ಜಿಲ್ಲೆಯಲ್ಲಿ ಮಂಗಳೂರಿಗಿಂತ ಅತೀ ದೊಡ್ಡ ಬಂದರನ್ನು ನಿರ್ಮಿಸುತ್ತಿದ್ದೇವೆ. ಏರ್‌ಪೋರ್ಟ ಕೂಡ ಬರಲಿದೆ. ಇಲ್ಲಿ ಅಭಿವೃದ್ಧಿ ಮಾಡಿಯೇ ನಾನು ವಿಶ್ರಮಿಸುತ್ತೇನೆ ಎಂದರು.

Comments

Leave a Reply

Your email address will not be published. Required fields are marked *