ಕೈಕಾಲುಗಳಿಲ್ಲದ ವ್ಯಕ್ತಿಗೆ ಕೆಲಸ ಕೊಟ್ಟ ಆನಂದ್ ಮಹೀಂದ್ರಾ

ನವದೆಹಲಿ: ಕೈಕಾಲುಗಳಿಲ್ಲದ ವ್ಯಕ್ತಿಯೊಬ್ಬನಿಗೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಕೆಲಸ ಕೊಟ್ಟಿದ್ದಾರೆ. ಈ ಕುರಿತು ಮಹೀಂದ್ರಾ ಅವರೇ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಆನಂದ್ ಮಹೀಂದ್ರಾ ಟ್ವಿಟ್ಟರ್‌ನಲ್ಲಿ ಆಗಾಗ್ಗೆ ತಾವು ಮಾಡುವ ಕೆಲಸಗಳ ಬಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ. ಇಂದು ಮಹೀಂದ್ರಾ ಅವರು ಟ್ವಿಟ್ಟರ್‌ನಲ್ಲಿ, ನಾವು ನಮ್ಮ ಕಂಪನಿಗೆ ಅಂಗವಿಕಲ ವ್ಯಕ್ತಿಯನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದು ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನರೇಗಾ ವಿಶ್ವಕ್ಕೆ ಮಾದರಿ: ಕೆ.ಎಸ್.ಈಶ್ವರಪ್ಪ 

ಮಹೀಂದ್ರಾ ಟ್ವಿಟ್ಟರ್‌ನಲ್ಲಿ, ಯೂಟ್ಯೂಬ್‍ನಲ್ಲಿ ಈ ಸಂಭಾವಿತ ವ್ಯಕ್ತಿಯ ಬಗ್ಗೆ ಅನೇಕ ಫಾಲೋ ಅಪ್ ವೀಡಿಯೋಗಳು ಮತ್ತು ನೆಗೆಟಿವ್ ಕಮೆಂಟ್‍ಗಳು ಬರುತ್ತಿದ್ದವು. ಆದರೆ ನಾನು ಬಿರ್ಜು ರಾಮ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ದೆಹಲಿಯಲ್ಲಿರುವ ನಮ್ಮ ಇವಿ ಚಾರ್ಜಿಂಗ್ ಯಾರ್ಡ್‍ನಲ್ಲಿ ಬಿರ್ಜು ರಾಮ್ ಅವರನ್ನು ನೇಮಿಸಿಕೊಳ್ಳಲಾಗಿದೆ. ಅವರ ಮೇಲಿನ ಎಲ್ಲಾ ವಿವಾದಗಳಿಗೂ ತೆರೆ ಎಳೆಯಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಬಿರ್ಜು ರಾಮ್ ಅವರಿಗೆ ಕೆಲಸ ಕೊಟ್ಟಿರುವ ವಿಚಾರ ಟ್ವೀಟ್ ಮಾಡಿದ ಮೇಲೆ ನೆಟ್ಟಿಗರು ವ್ಯಾಪಾಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ದೊಡ್ಡ ಗೌರವ, ನೀವು ಯಾವಾಗಲೂ ಜನರನ್ನು ಪ್ರೇರೇಪಿಸುತ್ತೀರಿ, ಅಭಿನಂದನೆಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಸರ್ ನಿಮ್ಮ ಮೇಲೆ ಇದ್ದ ಗೌರವ ದುಪ್ಪಟ್ಟಾಗಿದೆ. ನೀವು ಜನರ ಜೀವನದಲ್ಲಿ ನಿಜವಾದ ಬದಲಾವಣೆಯನ್ನು ತರುತ್ತಿದ್ದೀರಿ. ನೀವು ಹೀರೋ ಮತ್ತು ವಿಶ್ವದ ಅನೇಕ ಜನರಿಗೆ ಸ್ಫೂರ್ತಿ, ಜನರ ಪ್ರಯತ್ನಕ್ಕೆ ಸಹಾಯ ಮಾಡಲು ಮತ್ತು ಪ್ರಶಂಸಿಸಲು ನಿಮ್ಮ ರೀತಿಯ ಗೆಸ್ಚರ್‍ಗೆ ಸೆಲ್ಯೂಟ್ ಎಂದು ಹಲವು ಜನರು ಕಮೆಂಟ್ ಮಾಡಿ ಪ್ರಶಂಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಆನಂದ್ ಮಹೀಂದ್ರಾ ಅವರು ಕ್ವಾಡ್ರುಪಲ್ ಕುರಿತು ಒಂದು ವೀಡಿಯೋ ಹಂಚಿಕೊಂಡಿದ್ದರು. ಈ ಪೋಸ್ಟ್ ನಲ್ಲಿ ಅವರು, ಅಂಗವಿಕಲ ಬಿರ್ಜು ರಾಮ್ ಅವರನ್ನು ಹೊಗಳಿದ್ದರು. ಟ್ವೀಟ್ ನಲ್ಲಿ ಅವರು, ಇಂದು ನನ್ನ ಟೈಮ್‍ಲೈನ್‍ನಲ್ಲಿ ಇದನ್ನು ಸ್ವೀಕರಿಸಿದೆ. ಇದು ಎಷ್ಟು ಹಳೆಯದು, ಎಲ್ಲಿಂದ ಬಂದಿದೆ ಎಂದು ತಿಳಿದಿಲ್ಲ. ಆದರೆ ಈ ಸಂಭಾವಿತ ವ್ಯಕ್ತಿಯಿಂದ ನಾನು ಇದನ್ನು ಸ್ವೀಕರಿಸಿದ್ದೇನೆ. ಇದನ್ನು ನೋಡಿ ವಿಸ್ಮಯಗೊಂಡಿದ್ದೇನೆ. ಇವರ ದೇಹದಲ್ಲಿ ನ್ಯೂನತೆ ಇದ್ದರೂ, ಪ್ರತಿಭಾವಂತರು. ಲಾಸ್ಟ್ ಮೈಲ್ ಡೆಲಿವರಿಗಾಗಿ ಅವರನ್ನು ಬಿಸಿನೆಸ್ ಅಸೋಸಿಯೇಟ್ ಆಗಿ ಮಾಡಿ ಎಂದು ತಮ್ಮ ಕಂಪನಿಗೆ ಟ್ಯಾಗ್ ಮಾಡಿ ವೀಡಿಯೋ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಭವಿಷ್ಯದಲ್ಲಿ ಸೋಂಕಿನ ಸಂಭಾವ್ಯ ಅಲೆಗಳನ್ನು ಎದುರಿಸಲು ಸಿದ್ಧರಾಗಬೇಕು: ಗೌರವ್ ಗುಪ್ತ

ಈ ವೀಡಿಯೋಗೆ ಪ್ರತಿಕ್ರಿಯಿಸಿದ್ದ ಕೆಲವರು ರಾಮ್ ಅವರನ್ನು ನೆಗೆಟಿವ್ ಆಗಿ ಬಿಂಬಿಸಲು ಪ್ರಯತ್ನಿನಿಸಿದ್ದರು. ಈಗ ಎಲ್ಲ ವಿವಾದಗಳಿಗೆ ಮಹೀಂದ್ರಾ ಅವರೇ ತೆರೆ ಎಳೆದಿದ್ದಾರೆ.

Comments

Leave a Reply

Your email address will not be published. Required fields are marked *