ಸುಳ್ಯದಲ್ಲಿ ಮತ್ತೆ ಕಾಣಿಸಿಕೊಂಡ ಆನೆಗಳ ಹಿಂಡು- ದೂರು ಕೊಟ್ರೂ ಕ್ಯಾರೇ ಎನ್ನುತ್ತಿಲ್ಲ ಅರಣ್ಯಾಧಿಕಾರಿಗಳು

ಮಂಗಳೂರು: ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಲೆ ನಾಶ ಮಾಡಿದ್ದ ಆನೆಗಳು, ಈಗ ಮತ್ತೆ ನಗರವನ್ನು ಪ್ರವೇಶಿಸಿದೆ.

ಸುಳ್ಯ ನಗರದ ಬಸ್ಮಡ್ಕ ನದಿ ತೀರದಲ್ಲಿ ಕಾಣಿಸಿಕೊಂಡ ಕಾಡಾನೆಗಳು ನಗರದ ನಿವಾಸಿಗಳನ್ನು ಭಯಭೀತರನ್ನಾಗಿಸಿದೆ. ಈ ಹಿಂದೆ ಇಲ್ಲಿನ ಅನೇಕ ಬಾರಿ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ಭಯದಿಂದ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ನಗರಕ್ಕೆ ಕಾಡಾನೆಗಳ ಪ್ರವೇಶಿಸಿದ್ದರಿಂದ ನಗರ ಸಮೀಪ ಕೃಷಿ ತೋಟಗಳಿಗೆ ನುಗ್ಗುವ ಸಾಧ್ಯತೆ ಇದ್ದು, ಇದು ಕೃಷಿಕರನ್ನು ನಿದ್ದೆಗೆಡಿಸುವಂತೆ ಮಾಡಿದೆ.

https://www.youtube.com/watch?v=RLgXvjS4Ins&feature=youtu.be

Comments

Leave a Reply

Your email address will not be published. Required fields are marked *