ನನ್ನದೇ ಸರಿ ಅಂತಿದ್ದ ಅಮೂಲ್ಯ ತಣ್ಣಗೆ-ಪೊಲೀಸರ ಮುಂದೆ ಕನಸು ತೆರದಿಟ್ಟ ಪಾಕ್ ಪ್ರೇಮಿ

ಬೆಂಗಳೂರು: ನನ್ನದೇ ಸರಿ ಎಂದು ವಾದಿಸುತ್ತಿದ್ದ ಪಾಕ್ ಪ್ರೇಮಿ ಅಮೂಲ್ಯ ಲಿಯೋನ ತಣ್ಣಗಾಗಿದ್ದಾಳೆ. ಪೊಲೀಸ್ ಕಸ್ಟಡಿಯಲ್ಲಿರೋ ಅಮೂಲ್ಯ ತನ್ನ ಐಎಎಸ್ ಕನಸನ್ನು ತೆರದಿಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಅಮೂಲ್ಯ ಪೊಲೀಸರ ಮುಂದೆ ಯುಪಿಎಸ್‍ಸಿ ಕನಸು ಹೇಳಿಕೊಂಡಿದ್ದಾಳೆ. ಐಎಎಸ್ ಮಾಡಬೇಕು ಅನ್ಕೊಂಡಿದ್ದೆ, ಈಗ ಹೇಗೆ ಮಾಡೋದು ಎಂದು ಅಮೂಲ್ಯಗೆ ಪಶ್ಚಾತ್ತಾಪವಾಗಿದೆ. ವಿಚಾರಣೆ ಆರಂಭದಲಿ ತನಗೆ ಚಿಕನ್ ಪಾಪ್ ಕಾರ್ನ್ ಬೇಕು, ಇಲ್ಲಾಂದ್ರೆ ಊಟ ಮಾಡಲ್ಲ ಎಂದು ಹಠ ಹಿಡಿಯುತ್ತಿದ್ದ ಅಮೂಲ್ಯ ಬದಲಾಗಿದ್ದಾಳೆ. ಜೋಷ್ ನಲ್ಲಿ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದೆ ಎಂದು ಅಮೂಲ್ಯ ಪೊಲೀಸರ ಮುಂದೆ ಹೇಳಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟರ್ – ಪಾಕ್ ಪ್ರೇಮಿ ಅಮೂಲ್ಯ ಕೈವಾಡದ ಶಂಕೆ

ಮೊದಲಿಗೆ ತನ್ನನ್ನು ಸಮರ್ಥಿಸಿಕೊಳ್ಳುತ್ತಿದ್ದ ಅಮೂಲ್ಯ, ಈಗ ಪೊಲೀಸರ ಮಾತಿಗೆ ತಲೆದೂಗಿ ಮೌನವಾಗಿದ್ದಾಳೆ. ಬಂಧನವಾದಾಗ ಇದ್ದ ಅಮೂಲ್ಯಳಿಗೂ ಈಗಿನ ಅಮೂಲ್ಯಳಲ್ಲಿ ಸಾಕಷ್ಟು ವ್ಯತ್ಯಾಸ ಕಾಣುಬರುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

Comments

Leave a Reply

Your email address will not be published. Required fields are marked *