ಹಾವಿನೊಂದಿಗೆ ಆಟವಾಡಿದ ಮಹಾರಾಷ್ಟ್ರ ಡಿಸಿಎಂ ಪತ್ನಿ – ಮಹತ್ವದ ರಾಜಕೀಯ ಬೆಳವಣಿಗೆ ಎಂದ ನೆಟ್ಟಿಗರು!

ಮುಂಬೈ: ನಟಿ, ಗಾಯಕಿ ಹಾಗೂ ಸೋಶಿಯಲ್‌ ಮೀಡಿಯಾ ಸ್ಟಾರ್‌ ಆಗಿರುವ ಮಹರಾಷ್ಟ್ರ (Maharashtra) ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಫಡ್ನವೀಸ್‌ (Amruta Fadnavis) ಆಗಾಗ್ಗೆ ಜಾಲತಾಣಗಳಲ್ಲಿ ವಿಶೇಷ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ದಾರೆ.

ಇದೀಗ ಹಾವುಗಳನ್ನ ಕೈಯಲ್ಲಿ ಹಿಡಿದುಕೊಂಡ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳನ್ನ ಅಚ್ಚರಿಗೊಳಿಸಿದ್ದಾರೆ. ಒಂದು ಫೋಟೋದಲ್ಲಿ ಎರಡು ವಿಭಿನ್ನ ಪ್ರಬೇಧದ ಹಾವುಗಳನ್ನ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಉಡ ಸರಿಸೃಪವನ್ನು ಕೈಮೇಲೆ ಬಿಟ್ಟುಕೊಂಡಿದ್ದಾರೆ. ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ (Twitter) ಹಂಚಿಕೊಂಡಿದ್ದು, ʻಅತ್ಯಂತ ಅಪಾಯಕಾರಿ, ವಿಷಕಾರಿ ಮತ್ತು ಕ್ರೂರ ಪ್ರಾಣಿಗಳು ಮನುಷ್ಯರು ಮಾತ್ರ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಚಿವರ ಬೆಂಗಾವಲು ವಾಹನ ಡಿಕ್ಕಿ – ರಸ್ತೆಯಲ್ಲೇ ಅಂಬುಲೆನ್ಸ್ ಪಲ್ಟಿ, ರೋಗಿ ಪಾರು!

ಇದಕ್ಕೆ ಕೆಲವು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಹುಚ್ಚಾಟ ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಮತ್ತೊಬ್ಬರು ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ಹೆಚ್ಚಾಗಲು ಟ್ರಾಫಿಕ್ ಸಮಸ್ಯೆಯೂ ಕಾರಣವಾಗಿದೆ: ಅಮೃತಾ ಫಡ್ನವೀಸ್

ಈ ಹಿಂದೆ ಸುಲಿಗೆ ಪ್ರಕರಣವೊಂದರಲ್ಲಿ ಮುಂಬೈ ಪೊಲೀಸರ ವಿಶೇಷ ತನಿಖಾ ತಂಡವೊಂದು ಮೂವರು ಆರೋಪಿಗಳ ವಿರುದ್ಧ 700 ಪುಟಗಳ ಚಾರ್ಜ್‌ಶೀಟ್‌ (ದೋಷಾರೋಪ ಪಟ್ಟಿ) ಸಲ್ಲಿಸಿದಾಗ ಅಮೃತಾ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಅಮೃತಾ ಫಡ್ನವೀಸ್ ಅವರಿಗೆ ಲಂಚ ನೀಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮಲಬಾರ್ ಹಿಲ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 385 ಮತ್ತು 120 (B), ಜೊತೆಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8 ಮತ್ತು 12ರ ಅಡಿಯಲ್ಲಿ ಕೇಸ್‌ ದಾಖಲಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]