ಅಮಿತಾಭ್ ನಂತರ ಶಾಹಿದ್ ಕಪೂರ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ನ್ಯಾಷನಲ್ ಕ್ರಶ್

ಬಾಲಿವುಡ್ (Bollywood) ಸಿನಿಮಾ ರಂಗದಲ್ಲಿ ಮತ್ತೆ ಮಿಂಚಲು ರೆಡಿಯಾಗಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna). ಈಗಾಗಲೇ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಜೊತೆ ಬಿ ಟೌನ್ ನಲ್ಲಿ ತೆರೆ ಹಂಚಿಕೊಂಡಿರುವ ರಶ್ಮಿಕಾ, ಇದೀಗ ಶಾಹಿದ್ ಕಪೂರ್ (Shahid Kapoor) ಮುಖ್ಯ ಭೂಮಿಕೆಯ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಈಗಾಗಲೇ ಬಾಲಿವುಡ್ ನಲ್ಲಿ ರಶ್ಮಿಕಾ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಜೊತೆ ಆನಿಮಲ್ ಚಿತ್ರದಲ್ಲಿ ನಟಿಸುತ್ತಿದ್ದು, ವಿಕ್ಕಿ ಕೌಶಲ್ ಜೊತೆಯೂ ಒಂದು ಸಿನಿಮಾ ಮಾಡುತ್ತಿದ್ದಾರೆ. ಅಲ್ಲದೇ, ಛತ್ರಪತಿ ಶಿವಾಜಿ ಕುರಿತಾದ ಸಿನಿಮಾಗೂ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದ. ಈ ನಡುವೆ ಶಾಹಿತ್ ಅವರ ಹೊಸ ಸಿನಿಮಾ ಕೂಡ ರಶ್ಮಿಕಾಗೆ ಒಲಿದು ಬಂದಿದೆ. ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

ದಿಲ್ ರಾಜು, ಏಕ್ತಾ ಕಪೂರ್  ಜಂಟಿಯಾಗಿ ನಿರ್ಮಾಣ ಮಾಡಲಿರುವ, ಅನೀಸ್ ಬಾಜ್ಮಿ ನಿರ್ದೇಶನದಲ್ಲಿ ತಯಾರಾಗುವ ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಶಾಹಿದ್ ಹೊಸ ಬಗೆಯ ಪಾತ್ರ ಮಾಡುತ್ತಿರುವುದರಿಂದ ರಶ್ಮಿಕಾ ನಾಯಕಿಯಾದರೆ ಬೆಸ್ಟ್ ಎನ್ನುವ ಮಾತು ಚಿತ್ರತಂಡದಿಂದ ಬಂದಿದೆಯಂತೆ. ಹಾಗಾಗಿ ಅನೀಸ್ ಈಗಾಗಲೇ ರಶ್ಮಿಕಾ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹತ್ತು ಹಲವು ವಿಶೇಷಗಳನ್ನು ಈ ಸಿನಿಮಾ ಹೊಂದಿದ್ದು, ಶಾಹಿದ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಪಾತ್ರಕ್ಕಾಗಿ ಈಗಾಗಲೇ ಅವರು ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರಂತೆ. ಅಚ್ಚರಿಯ ತಾರಾಗಣವೇ ಸಿನಿಮಾದಲ್ಲಿ ಇರಲಿದ್ದು, ಭಾರೀ ಬಜೆಟ್ ನಲ್ಲಿ ತಯಾರಾಗುವ ಸಿನಿಮಾ ಇದಾಗಿದೆ.