ಅಮಿತಾಭ್ ಬಚ್ಚನ್ ಪಾತ್ರ ಪರಿಚಯಿಸಿದ ವೆಟ್ಟೈಯನ್: ಸತ್ಯದೇವ ಆದ ಬಿಗ್ ಬಿ

ಭಾರತೀಯ ಸಿನಿಮಾ ರಂಗದ ದಿಗ್ಗಜರುಗಳಾದ ರಜನಿ ಮತ್ತು ಅಮಿತಾಭ್ ಬಚ್ಚನ್ (Amitabh Bachchan) ವೆಟ್ಟೈಯನ್‍ (Vettaiyan)ಸಿನಿಮಾದಲ್ಲಿ ಜೊತೆಯಾಗಿದ್ದಾರೆ. ಹಲವು ವರ್ಷಗಳ ನಂತರ ಈ ಜೋಡಿ ಕಾಣಿಸಿಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಜೊತೆಗೆ ಅಮಿತಾಭ್ ಇಲ್ಲಿ ಯಾವ ರೀತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಕ್ಯೂರಿಯಾಸಿಟಿ ಕೂಡ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಈ ಸಿನಿಮಾದಲ್ಲಿ ಅಮಿತಾಭ್‍ ಅವರು ಸತ್ಯದೇವ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಸಣ್ಣ ತುಣುಕೊಂದನ್ನು ನಿರ್ಮಾಣ ಸಂಸ್ಥೆ ರಿಲೀಸ್ ಮಾಡಿದೆ. ಪಾತ್ರದ ಪರಿಚಯವನ್ನೂ ಈ ಮೂಲಕ ನಿರ್ಮಾಪಕರು ಮಾಡಿದ್ದಾರೆ. ರಜನಿ ಜೊತೆ ಆತ್ಮೀಯವಾಗಿರೋ ದೃಶ್ಯ ಕೂಡ ಅದರಲ್ಲಿದೆ.

ರಜನಿಕಾಂತ್ (Rajanikanth) ನಟನೆಯ ‘ಲಾಲ್ ಸಲಾಂ’ (Lal Salaam) ಸಿನಿಮಾ ರಜನಿ ಅಭಿಮಾನಿಗಳಿಗೆ ಏನೆಲ್ಲ ಬೇಕೊ ಎಲ್ಲವನ್ನೂ ಕೊಟ್ಟಿದ್ದರು. ಆದರೂ, ಅಂದುಕೊಂಡಷ್ಟು ಚಿತ್ರಕ್ಕೆ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗಲಿಲ್ಲ. ಮೊದಲ ದಿನ ಗಳಿಕೆ ನಾಲ್ಕುವರೆ ಕೋಟಿ ಎಂದು ಅಂದಾಜಿಸಲಾಗಿತ್ತು. ‘ಲಾಲ್ ಸಲಾಂ’ ಸೋಲಿನ ಬೆನ್ನಲ್ಲೇ ಹೊಸ ಸಿನಿಮಾ ತಲೈವ ಘೋಷಿಸಿದ್ದರು. ಅದೇ ವೆಟ್ಟೈಯನ್.

‘ವೆಟ್ಟೈಯನ್’ ಲಾಲ್ ಸಲಾಂ ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯೇ ಬಂಡವಾಳ ಹೂಡುತ್ತಿದೆ. ಈ ಸಿನಿಮಾಗೆ ಶೇಕಡ 80ರಷ್ಟು ಶೂಟಿಂಗ್ ಮುಕ್ತಾಯ ಆಗಿದೆ. ಇನ್ನುಳಿದ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ರಜನಿಕಾಂತ್ ಮಾಹಿತಿ ನೀಡಿದ್ದರು.

 

‌’ವೆಟ್ಟೈಯನ್’ ತಲೈವ ಅವರು ನಟಿಸುತ್ತಿರುವ 170ನೇ ಸಿನಿಮಾ. ಟೈಟಲ್ ಟೀಸರ್ ನೋಡಿದ ಎಲ್ಲರೂ ಈಗಾಗಲೇ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾಗೆ ‘ಜೈ ಭೀಮ್’ ಖ್ಯಾತಿಯ ಟಿ.ಜೆ. ಜ್ಞಾನವೇಲ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.