ಸೊಸೆಯನ್ನು ಹೊಗಳಿದ ಸ್ಪರ್ಧಿ ಮೇಲೆ ಬೇಸರಗೊಂಡ ಬಿಗ್-ಬಿ

ಮುಂಬೈ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ನಟಿ ಐಶ್ವರ್ಯ ರೈ ಅವರನ್ನು ಹೊಗಳಿದ ಸ್ಪರ್ಧಿ ಮೇಲೆ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಬೇಸರಗೊಂಡಿದ್ದಾರೆ.

ಪೂಜಾ ಜಾ ಎಂಬವರು ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅಮಿತಾಬ್ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಹಾಗೂ ಐಶ್ವರ್ಯ ಅಣ್ಣ – ತಂಗಿಯಾಗಿ ನಟಿಸಿದ ಚಿತ್ರ ಯಾವುದು ಎಂದು ಪ್ರಶ್ನೆ ಕೇಳಿದ್ದಾರೆ.

ಈ ಪ್ರಶ್ನೆಗೆ ಪೂಜಾ ‘ಜೋಶ್’ ಎಂದು ಉತ್ತರಿಸಿದ್ದರು. ಉತ್ತರ ನೀಡಿದ ಬಳಿಕ ಪೂಜಾ ನಟಿ ಐಶ್ವರ್ಯರನ್ನು ಹೊಗಳಲು ಶುರು ಮಾಡುತ್ತಾರೆ. “ನಾನು ಐಶ್ವರ್ಯ ಅವರ ದೊಡ್ಡ ಅಭಿಮಾನಿ. ನನಗೆ ಅವರ ಕಣ್ಣುಗಳೆಂದರೆ ನನಗೆ ತುಂಬಾ ಇಷ್ಟ” ಎಂದು ಹೇಳಿದ್ದರು.

ಪೂಜಾ ಅವರ ಮಾತಿನಿಂದ ಅಚ್ಚರಿಗೊಂಡ ಬಿಗ್-ಬಿ, ನಾನು ತುಂಬಾ ಬೇಸರಗೊಂಡಿದ್ದೆನೆ. ನೀನು ನನ್ನ ಕಣ್ಣುಗಳನ್ನು ಹೊಗಳಲಿಲ್ಲ. ಆದರೆ ನಾನು ನಿಮ್ಮ ಈ ಮಾತನ್ನು ಐಶ್ವರ್ಯಗೆ ಮರೆಯದೆ ಹೇಳುತ್ತೇನೆ ಎಂದು ಹೇಳಿ ಅಮಿತಾಬ್ ನಗಲು ಶುರು ಮಾಡುತ್ತಾರೆ.

2007ರಲ್ಲಿ ಐಶ್ವರ್ಯ ರೈ ನಟ ಅಭಿಷೇಕ್ ಬಚ್ಚನ್‍ರನ್ನು ಮದುವೆಯಾಗಿದ್ದರು. ದೀಪಾವಳಿ ಹಬ್ಬಕ್ಕೆ ಅಮಿತಾಬ್ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿದ್ದು, ನಟ ಶಾರೂಕ್ ಖಾನ್-ಗೌರಿ ಖಾನ್, ಅಜಯ್ ದೇವಗನ್-ಕಾಜೋಲ್, ಅಕ್ಷಯ್ ಕುಮಾರ್- ಟ್ವಿಂಕಲ್ ಖನ್ನಾ, ಕರಣ್ ಜೋಹರ್ ಸೇರಿದಂತೆ ಹಲವು ಕಲಾವಿದರಿಗೆ ಆಹ್ವಾನ ನೀಡಿದ್ದಾರೆ.

Comments

Leave a Reply

Your email address will not be published. Required fields are marked *