ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನಗರಗಳ ಹೆಸರನ್ನು ಬದಲಾಯಿಸುತ್ತಿರುವುದಕ್ಕೆ ಖ್ಯಾತ ಇತಿಹಾಸಕಾರ ಹಾಗೂ ಆಲೀಗಢ ಮುಸ್ಲಿಂ ವಿವಿಯ ಗೌರವ ಪ್ರೊಫೆಸರ್ ಇರ್ಫಾನ್ ಹಬೀಬ್ ವ್ಯಂಗ್ಯವಾಡಿದ್ದಾರೆ.
ಆಗ್ರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಹೆಸರಿನಲ್ಲಿರುವ ಶಾ ಎನ್ನುವ ಅಕ್ಷರ ಪರ್ಶಿಯನ್ ಮೂಲದ್ದು, ಅದು ಗುಜರಾತಿಗೆ ಸೇರಿದ್ದಲ್ಲ. ಹೀಗಾಗಿ ಅವರ ಹೆಸರನ್ನು ಮೊದಲು ಬದಲಾಯಿಸುವ ಕುರಿತು ಬಿಜೆಪಿ ಚಿಂತಿಸಲಿ. ಅಲ್ಲದೇ ಗುಜರಾತ್ ಹೆಸರು ಕೂಡ ಪರ್ಶಿಯನ್ ಮೂಲದ್ದು, ಇದನ್ನು ಗುಜರಾತ್ರ ಎಂದು ಕರೆಯಲಾಗುತ್ತಿತ್ತು. ಇದನ್ನೂ ಬಿಜೆಪಿಯವರು ಬದಲಿಸಬೇಕೆಂದು ಲೇವಡಿ ಮಾಡಿದ್ರು.

ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮಹಾನಗರಗಳ ಹೆಸರುಗಳನ್ನು ಬದಲಾವಣೆಯ ಮಾಡುವ ಹುಚ್ಚನ್ನು ಬೆಳೆಸಿಕೊಂಡಿದ್ದಾರೆ. ಇದು ಆರ್‍ಎಸ್‍ಎಸ್‍ನ ಹಿಂದುತ್ವ ನೀತಿಗೆ ಅನುಗುಣವಾಗಿದೆ. ಅಲ್ಲದೇ ನೆರೆಯ ಪಾಕಿಸ್ತಾನದಲ್ಲಿ ಇಸ್ಲಾಮಿಕ್‍ಗೆ ಸೇರಿಲ್ಲದವನ್ನೆಲ್ಲಾ ತೆಗೆದು ಹಾಕಿದ್ದರು. ಇಲ್ಲಿಯೂ ಸಹ ಅದೇರೀತಿ ಬಿಜೆಪಿ ಹಾಗೂ ಬಲಪಂಥೀಯ ಬೆಂಬಲಿಗರು ಹಿಂದೂಯೇತರ ಹೆಸರುಗಳನ್ನು, ಅದರಲ್ಲು ಪ್ರಮುಖವಾಗಿ ಇಸ್ಲಾಮಿಕ್ ಮೂಲದ ಹೆಸರುಗಳನ್ನು ಬದಲಿಸುತ್ತಿದ್ದಾರೆ ಎಂದು ಟೀಕಿಸಿದರು.
ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಇರುವ ಆಗ್ರಾ ನಗರವನ್ನು ಅಗ್ರವನ ಎಂದು ಮರುನಾಮಕರಣ ಮಾಡುವಂತೆ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಆಗ್ರಹಿಸಿದ್ದರು. ಇದಲ್ಲದೇ ಯೋಗಿ ಆದಿತ್ಯನಾಥ್ ರಾಜ್ಯದ ಮಹಾನಗರಗಳ ಹೆಸರನ್ನು ಬದಲಾವಣೆ ಮಾಡಿದ್ದರು. ಹೀಗಾಗಿ ಹಬೀಬ್ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply