ನವದೆಹಲಿ: ಲೋಕಸಭಾ ಚುನಾವಣೆಯ ಬಳಿಕ ಬಹಿರಂಗವಾದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಅಧಿಕಾರ ಪಡೆಯಲಿದೆ ಎಂಬ ವರದಿಯ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೈತ್ರಿ ಪಕ್ಷಗಳಿಗೆ ಡಿನ್ನರ್ ಏರ್ಪಡಿಸುತ್ತಿದ್ದಾರೆ.
ಬಿಜೆಪಿ ಮೂಲಗಳ ಅನ್ವಯ ಎನ್‍ಡಿಎ ಮೈತ್ರಿ ಪಕ್ಷಗಳಿಗೆ ಮಂಗಳವಾರದಂದು ಭೋಜನ ಕೂಡ ಏರ್ಪಡಿಸಲಾಗುತ್ತದೆ ಎನ್ನಲಾಗಿದೆ.

ದೇಶದ ಪ್ರಮುಖ 14 ಚುನಾವಣೋತ್ತರ ಸಮೀಕ್ಷೆಗಳಲ್ಲಿ 12 ಸಮೀಕ್ಷೆಗಳು ಎನ್‍ಡಿಎ ಮೈತ್ರಿ ಕೂಟ ಅಧಿಕಾರ ವಹಿಸಿಕೊಳ್ಳಲಿದೆ ಎಂದು ತಿಳಿಸಿವೆ. ಸುಮಾರು 282 ಸ್ಥಾನಗಳಿಂದ 365 ಸ್ಥಾನಗಳ ಒಳಗೆ ಎನ್‍ಡಿಎ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. 543 ಲೋಕಸಭಾ ಸ್ಥಾನಗಳ ಪೈಕಿ 542 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿರುವುದಿಂದ ಸಂಸತ್‍ನಲ್ಲಿ ಅಧಿಕಾರ ಪಡೆಯಲು 271 ಸ್ಥಾನಗಳ ಅಗತ್ಯವಿದೆ.
ಬಹುತೇಕ ಚುನಾಣೋತ್ತರ ಸಮೀಕ್ಷೆಗಳು 82 ರಿಂದ 165 ಸ್ಥಾನಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಡ ಪಡೆದುಕೊಳ್ಳಲಿದೆ ಎಂದು ತಿಳಿಸಿವೆ. ಉಳಿದಂತೆ 6 ಚುನಾವಣೋತ್ತರ ಸಮೀಕ್ಷೆಗಳು ಯುಪಿಎ ಮೈತ್ರಿಗಳಿಂದ ಇತರೇ ಪಕ್ಷಗಳು ಹೆಚ್ಚಿನ ಸ್ಥಾನವನ್ನು ಪಡೆಯಲಿವೆ ಎಂದು ಭವಿಷ್ಯ ನುಡಿದಿವೆ.

Leave a Reply