ಸಿಎಂ ಎಚ್‍ಡಿಕೆ ಗುಮಾಸ್ತ, ಸಿದ್ದರಾಮಯ್ಯ ಸೂಪರ್ ಸಿಎಂ, ಪರಮೇಶ್ವರ್ ಅರ್ಧ ಸಿಎಂ ಅಂತಾರೆ! – ಸಮ್ಮಿಶ್ರ ಸರ್ಕಾರವನ್ನ ಕುಟುಕಿದ ಶಾ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ಬಿಜೆಪಿ ಇಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮುಂದಾಳತ್ವದಲ್ಲಿ ಚಿಕ್ಕಬಳ್ಳಾಪುರದಲ್ಲಿ ಶಕ್ತಿ ಸಮಾವೇಶ ನಡೆಸಿ ಚುನಾವಣೆಗೆ ರಣಕಹಳೆ ಮೊಳಗಿಸಿತು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ದೋಸ್ತಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿ ಸಿಎಂ ಕುಮಾರಸ್ವಾಮಿ ಅವರು ಗುಮಾಸ್ತ ಅಂತಾರೆ, ಸಿದ್ದರಾಮಯ್ಯ ಸೂಪರ್ ಸಿಎಂ, ಪರಮೇಶ್ವರ್ ಅರ್ಧ ಸಿಎಂ ಅಂತಾರೆ. ಕರ್ನಾಟಕದಲ್ಲಿ ಎರಡೂವರೆ ಸಿಎಂಗಳು ಅಧಿಕಾರದಲ್ಲಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಸರ್ಕಾರದ ರಚಿಸಿದ ವೇಳೆ ಸಂಪೂರ್ಣ ಸಾಲಮನ್ನಾ ಮಾಡುತ್ತೇವೆ ಎಂದು ಸಿಎಂ ಹೇಳಿದ್ದರು. ಆದರೆ ಇದುವರೆಗೂ ಭರವಸೆ ನೀಡಿದ್ದ ಸಂಪೂರ್ಣ ಸಾಲಮನ್ನಾ ಆಗಿಲ್ಲ. ಆದರೆ ನಮ್ಮನ್ನು ಸಾಲಮನ್ನಾ ಮಾಡಿ ಎಂದು ಹೇಳುತ್ತಾರೆ. ಮೊದಲು ರಾಜ್ಯದಲ್ಲಿ ಸಾಲಮನ್ನಾ ಮಾಡಿ ಮಾತಾಡಿ ಎಂದು ರಾಹುಲ್ ಗಾಂಧಿ ಅವರಿಗೆ ಸವಾಲು ಎಸೆದರು.

ರಾಷ್ಟ್ರದಲ್ಲಿ ಆಗುತ್ತಿರುವ ಮಹಾಘಟ ಬಂಧನ ಅಧಿಕಾರಕ್ಕೆ ಬರಲ್ಲ. ಮಹಾಘಟ ಬಂಧನಕ್ಕೆ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ. ಅವರ ಸರ್ಕಾರ ಬಂದರೆ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಈ ಘಟಬಂಧನದ ಸರ್ಕಾರ ಬಡವರನ್ನು ಮೇಲೆತ್ತಲು ಸಾಧ್ಯವಿಲ್ಲ ಎಂದರು.

ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿಯೂ ಬಿಎಸ್ ಯಡಿಯೂರಪ್ಪ ಅವರು ಅತಿಹೆಚ್ಚು ಸ್ಥಾನ ಗೆದ್ದರು. ಆದರೆ ಅಪವಿತ್ರ ಮೈತ್ರಿಯಿಂದಾಗಿ ನಾವು ವಿರೋಧ ಪಕ್ಷದಲ್ಲಿ ಕುಳಿತಿದ್ದೇವೆ. ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಸೋನಿಯಾ ತಾಯಿ ಮತ್ತು ರಾಹುಲ್ ಗಾಂಧಿ ಎಂದು ಇಲ್ಲಿ ಸಿಎಂ ಹೇಳುತ್ತಾರೆ. ನಾನು ಮುಖ್ಯಮಂತ್ರಿಗಳಿಗೆ ನಿಮ್ಮ ನಿಷ್ಟೇ ರಾಜ್ಯದ ಜನರಿಗೆ ಇದೇಯಾ ಅಥವಾ ಸೋನಿಯಾ ಅವರ ಪಾದಕ್ಕಿದೆಯಾ ಎಂದು ಕೇಳುತ್ತೇನೆ ಎಂದು ಪ್ರಶ್ನಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *