ರಾಹುಲ್ ದೇವಾಲಯ ಭೇಟಿ ಮುನ್ನವೇ ಅಮಿತ್ ಶಾ ಮಠಗಳ ಭೇಟಿಗೆ ಮುಹೂರ್ತ ಫಿಕ್ಸ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ರಾಜ್ಯದಲ್ಲಿ ಮಠ ರಾಜಕೀಯ ಆರಂಭವಾಗಿದ್ದು, ಮಠಗಳಿಗೆ ಘಟಾನುಘಟಿ ರಾಜಕಾರಣಿಗಳ ದಂಡು ಭೇಟಿ ನೀಡಲು ಆರಂಭಿಸಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಉಡುಪಿ ಮಠದಲ್ಲಿ ವಾಸ್ತವ್ಯ ಹೂಡಲು ಸಿದ್ಧತೆ ನಡೆಸಿದ್ದಾರೆ. ಆದರೆ ಇವರ ಭೇಟಿಗೂ ಮುನ್ನವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಠಗಳ ಭೇಟಿಗೆ ದಿನಾಂಕ ನಿಗದಿಯಾಗಿದೆ.

ಸಿಎಂ ಸಿದ್ದರಾಮಯ್ಯ ತವರಲ್ಲೇ ಅಮಿತ್ ಶಾ ಅವರು ರಾಜಕೀಯ ರಣತಂತ್ರ ರೂಪಿಸಲು ಸಿದ್ಧತೆ ನಡೆಸಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ನೀಡಲು ಶಾ ಒಲವು ತೋರಿದ್ದು ಶ್ರೀಗಳ ಜತೆ ಮಾತುಕತೆ ನಡೆಸುವಂತೆ ಬಿಎಸ್‍ವೈಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾನು ಹಿಂದೂ ವಿರೋಧಿಯಲ್ಲ ಮೋದಿ ವಿರೋಧಿ, ಅಮಿತ್ ಶಾ ವಿರೋಧಿ, ಹೆಗ್ಡೆ ವಿರೋಧಿ- ಪ್ರಕಾಶ್ ರೈ

ಜನವರಿ 25 ರಂದು ಮೈಸೂರಿನಲ್ಲಿ ಬೃಹತ್ ಪರಿವರ್ತನಾ ಯಾತ್ರೆ ಸಮಾವೇಶ ನಡೆಯಲಿದ್ದು, ಅಂದು ಬೆಳಗ್ಗೆ ಸುತ್ತೂರು ಮಠಕ್ಕೆ ಅಮಿತ್ ಶಾ ಭೇಟಿಗೆ ಸಮಯ ನಿಗದಿ ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ. ಈ ಮೂಲಕ ಮೈಸೂರು ಭಾಗದ ವೀರಶೈವ, ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಮುಂದಾಗಿದೆ.

Comments

Leave a Reply

Your email address will not be published. Required fields are marked *