ರೋಗಿ ಇಲ್ಲದಿದ್ರೂ ಸೈರನ್ ಹಾಕ್ಕೊಂಡು ವೇಗವಾಗಿ ಬಂದು ಕಾರಿಗೆ ಗುದ್ದಿದ ಅಂಬುಲೆನ್ಸ್ ಚಾಲಕ

ತುಮಕೂರು: ನಗರದ ಅಂತರಸನಹಳ್ಳಿ ಸೇತುವೆ ಬಳಿ ಅಂಬುಲೆನ್ಸ್ ನಲ್ಲಿ ರೋಗಿಗಳು ಇಲ್ಲದೇ ಇದ್ದರೂ ವೇಗವಾಗಿ ಬಂದ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಈ ಆಂಬುಲೆನ್ಸ್ ಬೆಳಧರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಕಾರಿಗೆ ಡಿಕ್ಕಿ ಹೊಡೆದ ಬಳಿಕ ಸ್ಥಳೀಯರು ಅಂಬುಲೆನ್ಸ್ ಚಾಲಕ ಯುವರಾಜ್ ನನ್ನು ಹಿಡಿದು ಥಳಿಸಿದ್ದಾರೆ. ಅಂಬುಲೆನ್ಸ್ ನಲ್ಲಿ ರೋಗಿಗಳು ಇಲ್ಲದೆ ಇದ್ರೂ ಸೈರನ್ ಹಾಕಿ ವೇಗವಾಗಿ ಚಲಾಯಿಸಿದ್ದರಿಂದ ಕಾರಿಗೆ ಡಿಕ್ಕಿ ಹೊಡೆದಿದೆ.

ಅಂಬುಲೆನ್ಸ್ ವೇಗವಾಗಿ ಬಂದಿದ್ದರಿಂದ ಎರಡು ವಾಹನಗಳು ಜಖಂಗೊಂಡಿವೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

https://www.youtube.com/watch?v=UnIy_BECWH8

Comments

Leave a Reply

Your email address will not be published. Required fields are marked *