ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂತ ಅಂಬೇಡ್ಕರ್ ಹೇಳಿದ್ದರು: ಪ್ರತಾಪ್ ಸಿಂಹ

ಮಡಿಕೇರಿ: ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ಅವರಿಗೆ ಅಂದೇ ಇದೆಲ್ಲಾ ಗೊತ್ತಾಗಿತ್ತು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಹಿಜಬ್ ವಿಚಾರವಾಗಿ ಕೋರ್ಟ್ ತೀರ್ಪನ್ನೇ ಧಿಕ್ಕರಿಸಿ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಅಯೋಧ್ಯೆ ವಿಚಾರದಲ್ಲಿ ಕೋರ್ಟ್, ಕೋರ್ಟ್ ಎಂದು ಹೇಳುತ್ತಿದ್ದರು. ಕೋರ್ಟ್ ತೀರ್ಪಿನಲ್ಲಿಯೇ ದೇವಸ್ಥಾನ ಕಟ್ಟಿದ್ದೇವೆ ಎಂದರು. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ

ಇವರು ಕೋರ್ಟ್‍ನ್ನೇ ಹಿಯಾಳಿಸುತ್ತಿದ್ದಾರೆ. ಹಿಜಬ್ ವಿಷಯದಲ್ಲೂ ಅಷ್ಟೇ ಹಿಜಬ್ ವಿಚಾರಣೆಯಲ್ಲಿ ಧಾರ್ಮಿಕ ಕಟ್ಟುಪಾಡುಗಳಲ್ಲಿ ಹಿಜಬ್ ಕಡ್ಡಾಯ ಅಲ್ಲ ಎಂದು ತೀರ್ಪು ನೀಡಿದರು. ಇದೀಗ ಸಂವಿಧಾನದ ವಿರುದ್ಧ ತೀರ್ಪು ನೀಡುತ್ತಾರೆ. ಈ ಹಿಂದೆಯೇ ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂತ ಅಂಬೇಡ್ಕರ್ ಹೇಳಿದ್ದರು ಎಂದು ಹೇಳಿದರು. ಇದನ್ನೂ ಓದಿ: ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಸೇರಿಸೋ ಅವಶ್ಯಕತೆ ಇಲ್ಲ: ಡಿಕೆಶಿ

1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆ ಮಾಡುವ ಸಂದರ್ಭದಲ್ಲಿ ಹಿಂದೂಗಳು ಪಾಕಿಸ್ತಾನದಲ್ಲಿ ಇದ್ದರೆ ಭಾರತಕ್ಕೆ ಕರೆತನ್ನಿ ಭಾರತದಲ್ಲಿ ಇರುವ ಮುಸ್ಲಿಂ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಇವರು ಇಬ್ಬರು ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಅವರಿಗೆ ಯಾವತ್ತೋ ಅರ್ಥ ಆಗಿತ್ತು. ಆದರೆ ನಮಗೆ ಈಗ ಅರ್ಥ ಆಗುತ್ತಿದೆ. ಇವರಿಗೆ ದೇಶಕ್ಕಿಂತ ಧರ್ಮವೇ ಮುಖ್ಯ. ಹಾಗಾಗಿ ಕೋರ್ಟ್ ತೀರ್ಪನ್ನೇ ಧಿಕ್ಕರಿಸಿದ್ದಾರೆ ಎಂದು ಬಂದ್‍ಗೆ ಕರೆ ನೀಡಿದವರಿಗೆ ಟಾಂಗ್ ಕೊಟ್ಟರು.

Comments

Leave a Reply

Your email address will not be published. Required fields are marked *