ಅಂಬೇಡ್ಕರ್ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹೇಳಿದ್ರು: ಕಲ್ಲಡ್ಕ ಪ್ರಭಾಕರ ಭಟ್

ಉಡುಪಿ: ಮಾಜಿ ಪ್ರಧಾನಿ ನೆಹರೂ ಮತ್ತು ಅವರ ಬೆಂಬಲಿಗರದ್ದು ಹೇಡಿಗಳ ತಂಡ. ನೆಹರು ಕುರ್ಚಿಗಾಗಿ ದೇಶದ ಮಾನ ಕಳೆದರು. ದೇಶವನ್ನು ತುಂಡು ಮಾಡಿ ಗಾಂಧಿ ಮಹಾತ್ಮರಾದರು. ಬ್ರಿಟಿಷರು ಇನ್ನೈದು ವರ್ಷ ಭಾರತದಲ್ಲಿ ಇದ್ದಿದ್ದರೆ ಭಾರತದ ಸ್ಥಿತಿ ಹೀಗಾಗದೆ ಸ್ಥಿರವಾಗಿರುತ್ತಿತ್ತು ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯ್ದೆಯ ಜನಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, 72 ವರ್ಷದಲ್ಲಿ ಭಾರತ ದೇಶ ಭೂಮಿಯನ್ನೂ ಹಿಂದೂಗಳನ್ನು ಕಳೆದುಕೊಳ್ಳುತ್ತಿದೆ. ಅದ್ಭುತ ಹಿಂದೂ ಸಮಾಜ ಪಾತಾಳಕ್ಕೆ ಕುಸಿಯುತ್ತಿದೆ ಎಂದರು.

ಅಂಬೇಡ್ಕರ್ ಒಬ್ಬರು ರಾಷ್ಟ್ರೀಯ ನಾಯಕ. ಅವರನ್ನು ಒಂದು ಜಾತಿಗೆ ಸೀಮಿತ ಮಾಡಿದ್ದು ನಮ್ಮ ದುರ್ದೈವ. ಅಂಬೇಡ್ಕರ್ ಹೇಳಿದಂತೆ ನಾವು ಅವತ್ತೇ ಮಾಡಬೇಕಿತ್ತು. ಭಾರತದ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದ ಅಂಬೇಡ್ಕರ್ ಅವರ ಮಾತಿನಂತೆ ನಾವು ಮಾಡಬೇಕಿತ್ತು. ಅವರ ಸಲಹೆಯನ್ನು ಯಾರೂ ನಡೆಸಿಕೊಡಲಿಲ್ಲ. ಪಾಕ್‍ನ ಹಿಂದೂಗಳು ಭಾರತಕ್ಕೆ ಬರಲಿ ಎಂದು ಅವತ್ತೇ ಸಲಹೆ ಕೊಟ್ಟಿದ್ದರು ಎಂದು ಹೇಳಿದರು.

ಹಿಂದೂಗಳು ದೇವರನ್ನು ಪ್ರತಿದಿನ ಆರಾಧಿಸುತ್ತಾರೆ. ಸರ್ವೇಜನ ಸುಖಿನೋ ಭವಂತು ಅಂದ್ರೆ ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಸಂಸ್ಕೃತಿ ಭಾರತದ್ದು. ನಮ್ಮವರಿಗೆ ಮಾತ್ರ ಒಳ್ಳೆಯದಾಗಲಿ ಎಂಬ ಸಂಸ್ಕೃತಿ ನಮ್ಮದಲ್ಲ. ಶುಕ್ರವಾರ ಇರುವ ಅಲ್ಲಾ ಶನಿವಾರ ಎಲ್ಲಿ ಹೋಗ್ತಾನೆ? ಭಾನುವಾರ ಬೆಳಗ್ಗೆ ಬರುವ ಏಸು ಉಳಿದ ದಿನ ಎಲ್ಲಿ ಇರುತ್ತಾನೆ ಎಂದು ಪ್ರಶ್ನಿಸುವ ಮೂಲಕ ವಿವಾದ ಸೃಷ್ಟಿಸುವ ಮಾತನಾಡಿದರು.

ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಿದ್ದರಾಮಯ್ಯ ಅವರದ್ದು ಷಂಡ ಸರ್ಕಾರ. ಸೊರಕೆ-ಮಧ್ವರಾಜ್ ಬೆರಕೆಯವರು. ಹಗಲು ಮಾತ್ರವಾ? ರಾತ್ರಿಯೂ ಮುಸಲ್ಮಾನರ ಜೊತೆಗಿರ್ತಾರಾ ಎಂದು ಪ್ರಶ್ನಿಸುವ ಮೂಲಕ ಚರ್ಚಾಸ್ಪದ ಹೇಳಿಕೆ ಕೊಟ್ಟರು. ಅಲ್ಲದೆ ಕಾಂಗ್ರೆಸಿಗರಿಗೆ ಇಂಜೆಕ್ಷನ್‍ನಲ್ಲಿ ಬೇರೆ ಜೀನ್ಸ್ ತುಂಬಿದೆ. ಪೌರತ್ವ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದ್ದು, ಅದಕ್ಕೆ ಈಗ ತಿದ್ದುಪಡಿ ತರಲಾಗುತ್ತಿದೆ. ವೋಟ್ ಹೊರಟು ಹೋಗುತ್ತದೆ ಎಂಬ ಕಾರಣಕ್ಕೆ ಪ್ರಗತಿಪರ, ಮುಸಲ್ಮಾನರ ಜೊತೆ ಕಾಂಗ್ರೆಸ್ ಸೇರಿಕೊಂಡಿದೆ ಎಂದು ದೂರಿದರು.

ಇದೇ ವೇಳೆ, ರಾಮನಗರ ಜಿಲ್ಲೆಯ ಏಸು ಪ್ರತಿಮೆ ವಿಚಾರ ಪ್ರಸ್ತಾಪಿಸಿ ಹಿಂದೂ ದೇವರ ಬೆಟ್ಟದಲ್ಲಿ ಕ್ರೈಸ್ತರಿಗೆ ಏನು ಕೆಲಸ? ಶಿಲುಬೆ ಬೇರೆಡೆ ನಿರ್ಮಿಸಿ, ಬೇಕಿದ್ದರೆ ಅದಕ್ಕೆ ಏರಿ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.

Comments

Leave a Reply

Your email address will not be published. Required fields are marked *