ದೇಶಕ್ಕಾಗಿ ಬಾಬಾಸಾಹೇಬ್‌ ಅಂಬೇಡ್ಕರರು ಕಂಡ ಕನಸು ನನಸಾಗಿಸಲು ಬದ್ಧರಾಗೋಣ: ಮೋದಿ

ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ ಅವರ 131ನೇ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸೇರಿದಂತೆ ನಾಡಿನ ಅನೇಕ ಗಣ್ಯರು ಗೌರವ ಸಲ್ಲಿಸಿದ್ದಾರೆ.

ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಜಯಂತಿಗೆ ನನ್ನ ನಮನಗಳು. ಭಾರತದ ಪ್ರಗತಿಗಾಗಿ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ನಮ್ಮ ದೇಶಕ್ಕಾಗಿ ಅವರು ಕಂಡ ಕನಸನ್ನು ನಾವು ನನಸಾಗಿಸಲು ಬದ್ಧರಾಗುವ ದಿನ ಬಂದಿದೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ರಂಗೋಲಿಯಲ್ಲಿ ಮೂಡಿಬಂದ 20 ಅಡಿ ಯಶ್ ಭಾವಚಿತ್ರ

ಅಂಬೇಡ್ಕರ್ ಜಯಂತಿಯಂದು ಬಾಬಾಸಾಹೇಬರಿಗೆ ನಮನ! ಸಾಮಾಜಿಕ ನ್ಯಾಯದ ಪ್ರಬಲ ವಕೀಲರಾದ ಬಾಬಾಸಾಹೇಬರು ಸಂವಿಧಾನದ ಶಿಲ್ಪಿಯಾಗಿ ಆಧುನಿಕ ಭಾರತಕ್ಕೆ ಅಡಿಪಾಯ ಹಾಕಿದರು. ‘ಮೊದಲು ಭಾರತೀಯ, ನಂತರವೂ ಭಾರತೀಯ ಮತ್ತು ಕೊನೆಯಲ್ಲೂ ಭಾರತೀಯ’ ಎಂಬ ಅವರ ಆದರ್ಶಗಳನ್ನು ಅನುಸರಿಸಿ, ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಿಸುವಲ್ಲಿ ನಮ್ಮ ಪಾತ್ರವನ್ನು ಮಾಡೋಣ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ 131 ನೇ ಜಯಂತಿಗೆ ನಮನಗಳು. ಭಾರತಕ್ಕೆ ಬಲವಾದ ಶಕ್ತಿಯ ಆಧಾರ ಸ್ತಂಭವಾದ ನಮ್ಮ ಪವಿತ್ರ ಸಂವಿಧಾನವನ್ನು ನೀಡಿದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ನನ್ನ ನಮನಗಳು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ ಗೌರವ ಸಮರ್ಪಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಬದಲು ಕೆಜಿಎಫ್ 1 ಪ್ರದರ್ಶನ, ಆಕ್ರೋಶಗೊಂಡ ಅಭಿಮಾನಿಗಳು

Comments

Leave a Reply

Your email address will not be published. Required fields are marked *