ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಅಂಬಿ ಪುತ್ರ ಅಭಿಷೇಕ್!

ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ತಂದೆಗಿದ್ದ ಪ್ರೀತಿಯನ್ನು ಪಡೆಯಲು ಅಂಬಿಯ ಏಕೈಕ ಮಗ ಅಭಿಷೇಕ್ ರೆಡಿಯಾಗುತ್ತಿದ್ದಾರೆ. ಇನ್ನು ಕೆಲವೇ ವರ್ಷಗಲ್ಲಿ ಅಭಿಷೇಕ್ ಹೀರೊ ಆಗಿ ಎಂಟ್ರಿ ಕೊಡುವುದು ಖಚಿತವಾಗಿದೆ.

ಅಂಬರೀಶ್ ಮತ್ತು ಸುಮಲತಾ ಇವರಿಬ್ಬರ ಪ್ರೀತಿಯ ಪುತ್ರನಾದ ಅಭಿ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಕೆಲವು ಸಿನಿಮಾ ಪಾರ್ಟಿಗಳಲ್ಲಿ ಅಪ್ಪ ಅಮ್ಮನ ಜೊತೆ ಕಂಡಿದ್ದು ಬಿಟ್ಟರೆ ಗಾಂಧಿನಗರದಿಂದ ಬಲು ದೂರದಲ್ಲಿ ಅಭಿ ಉಳಿದುಕೊಂಡಿದ್ದಾರೆ.

ಅಭಿಷೇಕ್ ಆರಂಭದಿಂದಲೂ ವಿದ್ಯೆಯ ಕಡೆ ಹೆಚ್ಚು ಗಮನ ಕೊಡುತ್ತಿದ್ದರು. ವಿದೇಶಕ್ಕೆ ಹೋಗಿ ಪೊಲಿಟಿಕಲ್ ಸೈನ್ಸ್‍ನಲ್ಲಿ ಮಾಸ್ಟರ್ ಡಿಗ್ರಿ ಪಡೆದು ಬಂದರು. ಇದೀಗ ಅವರೂ ಬಣ್ಣದ ಲೋಕಕ್ಕೆ ಕಾಲಿಡುವ ಸೂಚನೆ ಅಮ್ಮ ಸುಮಲತಾ ಅವರಿಂದ ಸಿಕ್ಕಿದೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸುಮಲತಾ ಈ ವಿಷಯವನ್ನು ಸೂಚ್ಯವಾಗಿ ಹೇಳಿದ್ದಾರೆ. ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದಿದೆ. ಅಪ್ಪನಂತೆ ಮಗನೂ ಹೀರೋ ಆಗಲಿ ಎನ್ನುವ ಮಾತನ್ನು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ತಿಳಿಸಿದ್ದಾರೆ.

ಯಾವ್ಯಾವುದು ಯಾವಾಗ ಆಗಬೇಕೊ ಅದಾಗುತ್ತದೆ. ಅವನಿಗೆ ಏನು ಇಷ್ಟವೊ ಅದನ್ನು ಮಾಡಲಿ ನನ್ನದೇನೂ ಅಭ್ಯಂತರ ಇಲ್ಲ. ಅಭಿಷೇಕ್ ನನ್ನ ಹೆಸರನ್ನು ಬಳಸಿಕೊಂಡು ಉದ್ಯಮದಲ್ಲಿ ಬೆಳೆಯಬಾರದು. ಸ್ವಂತ ಪ್ರತಿಭೆಯಿಂದ ಜನರ ಮೆಚ್ಚುಗೆ ಗಳಿಸಬೇಕು. ಅದಷ್ಟೇ ನನ್ನ ಕನಸು ಎಂದು ಅಂಬರೀಷ್ ಈ ಹಿಂದೆ ಹೇಳಿದ್ದರು.

Comments

Leave a Reply

Your email address will not be published. Required fields are marked *