ರೆಬೆಲ್ ‘ದರ್ಶನ’ಕ್ಕಾಗಿ ಹರಿದು ಬಂದು ಜನಸಾಗರ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಸರದಾರ ರೆಬೆಲ್ ಸ್ಟಾರ್ ಅಂಬಿ ದರ್ಶನಕ್ಕಾಗಿ ಇಂದು ಜನಸಾಗರ ಕಂಠೀರವ ಸ್ಟುಡಿಯೋಗೆ ಹರಿದು ಬಂದಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಹಲವರು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದರು.

ಅಭಿಮಾನಿಗಳು ಸಕ್ಕರೆ ನಾಡಿನ ಅಕ್ಕರೆಯ ಅಣ್ಣನ ಅಂತಿಮ ಯಾತ್ರೆಯಲ್ಲಿ ಸಾಗರೋಪಾದಿಯಲ್ಲಿ ಸೇರಿದ್ದರು. ನಿನ್ನೆ ತಮ್ಮ ನೆಚ್ಚಿನ ನಾಯಕನನ್ನ ಕಾಣದ ಹಲವರು ಇಂದು ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದರು. ರಾತ್ರಿ 2 ಗಂಟೆಯವರೆಗೂ ಜಮಾಯಿಸಿದ್ರು ಅಭಿಮಾನಿಗಳು ಮತ್ತೆ ಮುಂಜಾನೆ 6 ಕ್ಕೆ ನಮ್ಮ ಅಣ್ಣನನ್ನ ನೋಡಬೇಕು ಗೇಟ್ ತೆಗಿರಿ ಅಂತ ಕಂಠೀರವ ಸ್ಟುಡಿಯೋ ಮುಂದೆ ಸೇರಿದ್ದರು.

ಸುಮಾರು ಹತ್ತು ಗಂಟೆಯಿಂದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ತುಂಬು ಹೃದಯದ ನಮನ ಸಲ್ಲಿಸಿದರು. ದರ್ಶನ್ ಕೂಡ ಇಂದು ಅಂಬಿ ಪುಣ್ಯಭೂಮಿಗೆ ಭೇಟಿ ಕೊಟ್ರು. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ ಮುಂದಿನ ವಿಧಿವಿಧಾನಗಳ ಬಗ್ಗೆ ಗಮನ ಹರಿಸುತ್ತಿದ್ದರು. ನಾಳೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ ಚಿತಾಭಸ್ಮವನ್ನ ಕಾವೇರಿ ಮಡಿಲಿಗೆ ಅರ್ಪಿಸಲಿದ್ದಾರೆ.

ಬುಧವಾರ ಬೆಳಗ್ಗೆ 9 ರಿಂದ 10 ಗಂಟೆ ಸುಮಾರಿಗೆ ರೆಬೆಲ್ ಸ್ಟಾರ್ ಕುಟುಂಬ ಸದಸ್ಯರು ಕಂಠೀರವ ಸ್ಟುಡಿಯೋದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ನಾಳೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರೋ ಸಾಧ್ಯತೆ ಇದೆ. ಬದುಕಿದ್ದಾಗ ರೆಬೆಸ್ಟಾರ್ ಎಷ್ಟು ಜನರ ಮನದಲ್ಲಿ ಮನೆಮಾಡಿದ್ರು ಅನ್ನೋದಕ್ಕೆ ಅಭಿಮಾನಿಗಳ ಈ ಪ್ರೀತಿಯೇ ಸಾಕ್ಷಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *