ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿದೆ. ಒಕ್ಕಲಿಗರ ಸಂಪ್ರದಾಯದಂತೆ ಅಂಬಿ ಭೌತಿಕ ಕಾಯವನ್ನು ಸುಡಲಾಗುತ್ತದೆ.
ತಲತಲಾಂತರಗಳಿಂದ ಅಂಬಿ ಮನೆತನದ ಪೌರೋಹಿತ್ಯ ಮಾಡುತ್ತಿರುವ ಮದ್ದೂರು ಮೂಲದ ಪುರೋಹಿತರಾದ ಚಿಕ್ಕ ಹುಚ್ಚಯ್ಯ, ಕೋಣಪ್ಪ ಪೂಜಾರಿ ನೇತೃತ್ವದಲ್ಲಿ ಅಂತ್ಯಸಂಸ್ಕಾರದ ಅಂತಿಮ ವಿಧಿವಿಧಾನಗಳು ನಡೆಯಲಿದೆ. ಇದನ್ನೂ ಓದಿ: ಕರ್ಮಭೂಮಿಯಲ್ಲಿ ಕರ್ಣನಿಗೆ ನಮನ – ಅಭಿಮಾನಿಗಳನ್ನು ನಿಯಂತ್ರಿಸಲು ವೇದಿಕೆ ಏರಿದ ಯಶ್

ಏನೇನು ವ್ಯವಸ್ಥೆ ಮಾಡಲಾಗಿದೆ?
ಸಾರ್ವಜನಿಕರು ಹಿಂಬದಿ ಗೇಟ್ ಮೂಲಕ ಪ್ರವೇಶಿಸಬಹುದಾಗಿದ್ದು, 4 ಕಡೆ ಎಲ್‍ಇಡಿ ಪರದೆಯನ್ನು ಹಾಕಲಾಗಿದೆ. ಸಾರ್ವಜನಿಕರಿಗೆ 2 ಸಾವಿರ, ವಿಐಪಿಗಳಿಗೆ 1 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸಿಮೆಂಟ್, ಇಟ್ಟಿಗೆಯಿಂದ 16*16 ಸುತ್ತಳತೆ ಚಿತೆ ನಿರ್ಮಿಸಲಾಗಿದೆ. ಚಿತೆಗೆ ಬಿಳಿ ಬಣ್ಣವನ್ನು ಬಳಿಯಲಾಗಿದ್ದು, ಎಲ್ಲರಿಗೂ ಕಾಣಿಸಲೆಂದು ಒಂದೂವರೆ ಅಡಿ ಎತ್ತರದಲ್ಲಿ ಚಿತೆಯನ್ನು ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ:ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?
ನಟಸಾರ್ವಭೌಮ ವರನಟ ರಾಜಕುಮಾರ್ ಅವರ ಸಮಾಧಿಯ ಎದುರುಗಡೆ ಇರುವ ಒಂದೂವರೆ ಎಕರೆ ಸರ್ಕಾರಿ ಭೂಮಿಯಲ್ಲಿ ಅಂಬರೀಶ್ ಅಂತ್ಯಕ್ರಿಯೆ ನಡೆಯಲಿದೆ. ಇಲ್ಲಿಯೇ ಅಂಬಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಇದನ್ನೂ ಓದಿ : ಅಂಬಿ ಪಾರ್ಥಿವ ಶರೀರ ರವಾನೆಗೆ ಮತ್ತೊಮ್ಮೆ ಕಾಲದ ಮೊರೆ ಹೋದ ಸಮ್ಮಿಶ್ರ ಸರ್ಕಾರ!

ಅಂಬಿ ಅಂತಿಮ ಯಾನ:
* ಬೆಳಗ್ಗೆ 9 ಗಂಟೆ – ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯದಿಂದ ಬೆಂಗಳೂರಿಗೆ ಪಾರ್ಥಿವ ಶರೀರ ರವಾನೆ
* ಬೆಳಗ್ಗೆ 10 ಗಂಟೆ – ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿರುವ ಅಂಬಿ ಹೊತ್ತ ಹೆಲಿಕಾಪ್ಟರ್
* ಬೆಳಗ್ಗೆ 10.15 ಗಂಟೆ – ಹೆಚ್‍ಎಎಲ್‍ನಿಂದ ಕಂಠೀರವ ಸ್ಟೇಡಿಯಂಗೆ ಅಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರ ಶಿಫ್ಟ್ (ಸಾರ್ವಜನಿಕ ದರ್ಶನ ಇರಲ್ಲ)
* ಬೆಳಗ್ಗೆ 11 ಗಂಟೆ – ಕಂಠೀರವ ಸ್ಟೇಡಿಯಂನಿಂದ ತೆರೆದ ವಾಹನದಲ್ಲಿ ಅಂಬಿ ಅಂತಿಮ ಯಾನ ಆರಂಭ
* ಮಧ್ಯಾಹ್ನ 1 ಗಂಟೆ – ಕಂಠೀರವ ಸ್ಟುಡಿಯೋಗೆ ಅಂಬರೀಶ್ ಪಾರ್ಥಿವ ಶರೀರ ರವಾನೆ
* ಮಧ್ಯಾಹ್ನ 2 ಗಂಟೆ – ಸಕಲ ಸರ್ಕಾರಿ ಗೌರವಗಳೊಂದಿಗೆ ಅಣ್ಣಾವ್ರ ಸ್ಮಾರಕದ ಪಕ್ಕದಲ್ಲಿ ಅಂಬಿ ಅಂತ್ಯಕ್ರಿಯೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply