ಚಂಡೀಗಢ: ಪಂಜಾಬ್ ಕಾಂಗ್ರೆಸ್ನಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿದ್ದು, ಕಡೆಗೂ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಇದೀಗ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಮೂಡಿದ್ದು, ಸಿಎಂ ರೇಸ್ನಲ್ಲಿ ಅಚ್ಚರಿಯ ಹೆಸರಗಳು ಕೇಳಿಬರುತ್ತಿದೆ.

ಹೈಕಮಾಂಡ್ ಒತ್ತಡದ ಹಿನ್ನೆಲೆಯಲ್ಲಿ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದು, ಪಕ್ಷದ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ. ನನಗೆ ಪದೇ ಪದೇ ಅವಮಾನ ಆಗ್ತಿದೆ. ಇದನ್ನು ಅವಮಾನ ಎಂದೇ ಪರಿಗಣಿಸುತ್ತಿರುವೆ. ಬಹುಷಃ ಹೈಕಮಾಂಡ್ಗೆ ನನ್ನ ಮೇಲೆ ನಂಬಿಕೆ ಇಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಅವರಿಗೆ ಯಾರ ಮೇಲೆ ನಂಬಿಕೆ ಇದ್ಯೋ ಅವರು ಸಿಎಂ ಆಗ್ಲಿ. ನನ್ನ ಮುಂದೆ ಆಯ್ಕೆಗಳು ಮುಕ್ತವಾಗಿವೆ ಎಂದಿದ್ದಾರೆ. ಈ ಮೂಲಕ ಪಕ್ಷ ತೊರೆಯುವ ಸುಳಿವನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ ನೀಡಿದ್ದಾರೆ.
https://twitter.com/ANI/status/1439219430584508417
ಪಂಜಾಬ್ ಕಾಂಗ್ರೆಸ್ನ ಬಹುತೇಕ ಶಾಸಕರು ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಒತ್ತಡ ಹೇರಿದ್ರು. ಬಳಿಕ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದರು. ಈ ಬೆನ್ನಲ್ಲೇ ಚಂಡೀಗಢದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಮುಂದಿನ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದ್ದು, ಈ ನಡುವೆ ಪ್ರಬಲ ಅಭ್ಯರ್ಥಿಯಾಗಿ ನವಜೋತ್ ಸಿಂಗ್ ಸಿಧು ಹೆಸರು ಕೇಳಿಬಂದಿದೆ. ಈ ನಡುವೆ ಅಚ್ಚರಿಯ ಹೆಸರೆಂಬಂತೆ ಸುನಿಲ್ ಜಾಖರ್ ಅವರ ಹೆಸರು ಹರಿದಾಡುತ್ತಿದೆ. ಇದನ್ನೂ ಓದಿ: ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ

67 ವರ್ಷದ ಸುನಿಲ್ ಜಾಖರ್ ಪಂಜಾಬ್ ಕಾಂಗ್ರೆಸ್ ಸಮಿತಿ ಮಾಜಿ ಮುಖ್ಯಸ್ಥರಾಗಿದ್ದರು. ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು 2019 ರಲ್ಲಿ ಬಾಲಿವುಡ್ ನಟ ಸನ್ನಿ ಡಿಯೋಲ್ ಎದುರು ಪರಾಭವಗೊಂಡಿದ್ದರು. ಸೋಲಿನ ನೈತಿಕ ಹೊಣೆ ಹೊತ್ತು ಸುನಿಲ್ ಜಾಖರ್ ಪಿಸಿಸಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಇವರ ಹೆಸರು ಕೂಡ ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ಮುಂದಾದ ಕಾಂಗ್ರೆಸ್- ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ?

ಪಂಚಾಬ್ ಚುನಾವಣೆಗೆ ಕೆಲ ತಿಂಗಳುಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ. ರಾಜಸ್ಥಾನದಲ್ಲೂ ನಾಯಕತ್ವ ಬದಲಾವಣೆಗೆ ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಶೀಘ್ರವೇ ಕಾಂಗ್ರೆಸ್ಗೆ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು: ಶಶಿ ತರೂರ್

Leave a Reply