ರಾಜ್ಯದಲ್ಲಿ ಏನಾದ್ರೂ ನಾನೇ ಕಾರಣನಾ? ನನಗೂ ಸಿ.ಟಿ ರವಿ ಬಗ್ಗೆ ಸಿಂಪತಿ ಇದೆ – ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಏನಾದ್ರೂ ನಾನೇ ಕಾರಣನಾ? ಬಿಜೆಪಿಯವರ (BJP) ಮನೆಯಲ್ಲಿ, ಪಕ್ಷದಲ್ಲಿ ಅಷ್ಟೇ ಯಾಕೆ, ಅವರ ಹೊಟ್ಟೆ ಒಳಗೆ ಏನಾದ್ರೂ ನಾನೇ ಕಾರಣನಾ? ಅಂತ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಪ್ರಶ್ನಿಸಿದರು.

ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ (CT Ravi) ಅವರಿಗೆ ಕೋರ್ಟ್‌ ಜಾಮೀನು ನೀಡಿದ ವಿಚಾರವಾಗಿ ಮಾತನಾಡಿದ ಡಿಸಿಎಂ, ಬೇಲ್ ವಿಚಾರ ಕೋರ್ಟ್‌ಗೆ ಸಂಬಂಧಿಸಿದ್ದು, ಕಾನೂನು ಉಂಟು, ಕೋರ್ಟ್ ಉಂಟು, ಅವರು ಉಂಟು ಎಲ್ಲದಕ್ಕೂ ನನ್ನನ್ನ ಕೇಳಿದ್ರೆ ಹೇಗೆ? ರಾಜ್ಯದಲ್ಲಿ ಏನಾದ್ರೂ ನಾನೇ ಕಾರಣ, ಅವರ ಪಕ್ಷ, ಹೊರಗಡೆ, ಮನೆ, ಹೊಟ್ಟೆ ಒಳಗೆ ಏನಾದ್ರೂ ಎಲ್ಲದಕ್ಕೂ ನಾನೇ ಕಾರಣ. ನನ್ನ ನೆನಸಿಕೊಂಡಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ ಎಂದು ಕುಟುಕಿದರು. ಇದನ್ನೂ ಓದಿ: Chamarajanagara | ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್‌

ಕಾನೂನಿಗೆ, ಕೋರ್ಟ್‌ಗೆ ಏನು ಗೌರವ ಕೊಡಬೇಕೊ ಕೊಡುತ್ತೇವೆ. ಕೋರ್ಟ್ ಏನು ಬೇಕೋ ನಿರ್ಧಾರ ತೆಗೆದುಕೊಳ್ಳುತ್ತೆ. ಮೊದಲು ಅವರು ಮಾತನಾಡಿದ್ದು ಸರೀನಾ ಅಂತ ಕೇಳಿ? ಅವರ ಭಾಷೆ, ಸಂಸ್ಕ್ರತಿಯಿಂದ ಹರುಕು ಬಾಯಿ ಅನ್ನೋದು ಗೊತ್ತಾಗಿದೆ. ಈ ಹಿಂದೆ ಜಯಮಾಲಾಗೂ ಮಾತಾಡಿದ್ರು, ಸಿಎಂ ಬಗ್ಗೆನೂ ಮಾತನಾಡಿದ್ರು, ನಿತ್ಯ ಸುಮಂಗಲಿ ಅಂತ ಹೇಳಿದ್ರು, ಇದು ಸರಿನಾ, ತಪ್ಪಾ? ಎಂದು ಪ್ರಶ್ನಿಸಿದರು.

ಸಿ.ಟಿ ರವಿ ಮೇಲೆ ನನಗೂ ಸಿಂಪತಿ ಇತ್ತು. ಚಿಕ್ಕಮಗಳೂರು ಜನ ಅಂದರೆ ಸಂಸ್ಕೃತಿಯುಳ್ಳ ಜನ. ಆದ್ರೆ ಆ ಪಾರ್ಟಿಯಲ್ಲಿ ಇರೋರು ಹೆಣ್ಣು ಮಕ್ಕಳ ಬಗ್ಗೆ ಸರಿಯಾಗಿ ಅಂತ ಅರ್ಥ ಮಾಡಿಕೊಳ್ಳಬೇಕು. ಆತ್ಮ ಸಾಕ್ಷಿ ಇದ್ರಲ್ಲಿ ಮುಖ್ಯ ಆಗುತ್ತೆ. ಪಕ್ಷದ ಲೀಡರ್‌ಗೆ ಸುಮ್ಮನೆ ಸಪೋರ್ಟ್ ಮಾಡೋದಲ್ಲ, ಅದನ್ನ ಖಂಡಿಸಬೇಕಲ್ವಾ..? ಸರಿ ಇಲ್ಲ ಅಂತ ಹೇಳಬೇಕಲ್ವಾ? ನನ್ನ ಪಕ್ಷದಲ್ಲಿ ಮಾತಾಡಿದ್ರೆ ಖಂಡಿಸ್ತಿದ್ದೆ ಎಂದು ನುಡಿದರು. ಇದನ್ನೂ ಓದಿ: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ – ಇಂದಿನಿಂದ ಮೋದಿ ಕುವೈತ್‌ ಪ್ರವಾಸ

https://youtu.be/YlG_OlaLqTs?si=S8uo8ZIt7aSb5XZm

ಇದೇ ಪ್ರಭಾವಿ ಶಾಸಕರೊಬ್ಬರ ಪ್ರಕರಣದಲ್ಲಿ ಆರ್‌. ಅಶೋಕ್ ಏನ್ ಹೇಳಿದ್ರು? ಎಫ್‌ಎಸ್‌ಎಲ್‌ ವರದಿ ಬಂದ ತಕ್ಷಣ ಉಚ್ಚಾಟನೆ ಅಂತ ಹೇಳಿದ್ರು. ಈಗ ಏನ್‌ ಹೇಳ್ತಾರೆ ಎಂದು ಕಿಡಿ ಕಾರಿದ್ರು.