ಟ್ರಾವೆಲ್ ಮಾಡೋವಾಗ ಯಾವಾಗ್ಲೂ ಇಟ್ಟುಕೊಂಡಿರಿ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್

ನೀವು ಕಾಫಿ ಹಾಗೂ ಚಾಕ್ಲೇಟ್ ಪ್ರಿಯರಾಗಿದ್ದರೆ ಈ ರೆಸಿಪಿ ನಿಮಗೆ ಖಂಡಿತಾ ಇಷ್ಟವಾಗುತ್ತದೆ. ನೀವು ಟ್ರಾವೆಲ್ ಮಾಡುತ್ತಿರೋ ಸಂದರ್ಭ ಹಸಿವಾದರೆ, ಹೊರಗಡೆಯಿಂದ ಏನೂ ಖರೀದಿ ಮಾಡೋಕೆ ಸಾಧ್ಯವಾಗದೇ ಹೋದರೆ ಎನರ್ಜಿ ಬೈಟ್‌ಗಳು ಯಾವಾಗಲೂ ಉಪಯೋಗಕ್ಕೆ ಬರುತ್ತದೆ. ಇದನ್ನು ಲಘು ಆಹಾರವಾಗಿ ಯಾವಾಗ ಬೇಕಾದರೂ ಸವಿಯಬಹುದು. ಎನರ್ಜಿ ಬೈಟ್‌ಗಳನ್ನು ಹೆಚ್ಚಾಗಿ ಒಣ ಹಣ್ಣುಗಳಿಂದ ಮಾಡಲಾಗುತ್ತದೆ. ನಾವಿಂದು ಹೇಳಿಕೊಡುತ್ತಿರೋ ಅಂತಹುದೇ ರೆಸಿಪಿ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್.

ಬೇಕಾಗುವ ಪದಾರ್ಥಗಳು:
ಒಣ ಗೋಡಂಬಿ – 1 ಕಪ್
ಕಾಫಿ ಬೀಜಗಳು – 3 ಟೀಸ್ಪೂನ್
ಮೃದು ಖರ್ಜೂರ – 1 ಕಪ್
ಸಣ್ಣಗೆ ಕತ್ತರಿಸಿದ ಡಾರ್ಕ್ ಚಾಕ್ಲೇಟ್ ಅಥವಾ ಚಾಕ್ಲೇಟ್ ಚಿಪ್ಸ್ – ಕಾಲು ಕಪ್ ಇದನ್ನೂ ಓದಿ: ಫ್ರೀ ಟೈಮ್‌ನಲ್ಲಿ ಬೇಕೆನಿಸುತ್ತೆ ಚಟ್‌ಪಟಾ ಆಲೂ ಚಾಟ್

ಮಾಡುವ ವಿಧಾನ:
* ಮೊದಲಿಗೆ ಬ್ಲೆಂಡರ್‌ಗೆ ಗೋಡಂಬಿ ಹಾಗೂ ಕಾಫಿ ಬೀಜಗಳನ್ನು ಹಾಕಿ ಒರಟಾಗಿ ಪುಡಿ ಮಾಡಿಕೊಳ್ಳಿ.
* ಮೃದುವಾದ ಖರ್ಜೂರಗಳ ಬೀಜಗಳನ್ನು ಬೇರ್ಪಡಿಸಿ, ನಂತರ ಹೋಳುಗಳನ್ನು ಬ್ಲೆಂಡರ್‌ಗೆ ಹಾಕಿ ಮತ್ತೆ ಒರಟಾಗಿ ಪುಡಿ ಮಾಡಿ.
* ಈಗ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿ 1 ಟೀಸ್ಪೂನ್ ನೀರನ್ನು ಬೆರೆಸಿ.
* ಮಿಶ್ರಣವನ್ನು ನಿಮ್ಮ ಕೈಗಳಿಂದ ಉಂಡೆಗಳಾಗಿ ಮಾಡುವಷ್ಟು ಜಿಗುಟಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಮಿಶ್ರಣ ಇನ್ನು ಕೂಡಾ ಒಣ ಎನಿಸಿದರೆ ಮತ್ತೆ ಒಂದೆರಡು ಟೀಸ್ಪೂನ್ ನೀರು ಸೇರಿಸಿ ಮತ್ತೆ ಜಿಗುಟುತನವನ್ನು ಪರಿಶೀಲಿಸಿ.
* ಈಗ ಮಿಶ್ರಣಕ್ಕೆ ಚಾಕ್ಲೇಟ್ ಚಿಪ್ಸ್ ಅಥವಾ ಸಣ್ಣಗೆ ಕತ್ತರಿಸಿದ ಡಾರ್ಕ್ ಚಾಕ್ಲೇಟ್ ಹಾಕಿ ಮಿಶ್ರಣ ಮಾಡಿ.
* ಈಗ ಮಿಶ್ರಣವನ್ನು ನಿಂಬೆ ಗಾತ್ರದ ಉಂಡೆಗಳಾಗಿ ಕಟ್ಟಿಕೊಳ್ಳಿ.
* ಇದೀಗ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್ ತಯಾರಾಗಿದ್ದು ಸವಿಯಲು ಸಿದ್ಧವಾಗಿದೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಫ್ರಿಜ್‌ನಲ್ಲಿ ಇಟ್ಟರೆ 2 ವಾರಗಳ ವರೆಗೆ ಸವಿಯಬಹುದು. ರೂಂ ಟೆಂಪರೇಚರ್‌ನಲ್ಲಿ ಇದನ್ನು ಒಂದೆರಡು ದಿನಗಳವರೆಗೆ ಇಟ್ಟು ಸವಿಯಬಹುದು. ಇದನ್ನೂ ಓದಿ: ಗರಿಗರಿಯಾದ ಕಾರ್ನ್ ಪಕೋಡಾ ಸವಿಯಲು ತುಂಬಾ ಮಜಾ