ಅಲ್‍ಖೈದಾಕ್ಕೆ ಸಮಸವಸ್ತ್ರದ ಮಹತ್ವ ಅರ್ಥವಾಗಲ್ಲ: ಹಿಮಂತ ಬಿಸ್ವಾ

ಡೆಹ್ರಾಡೂನ್: ಅಲ್‍ಖೈದಾಕ್ಕೆ ಸಮಸವಸ್ತ್ರದ ಮಹತ್ವ ಅರ್ಥವಾಗುವುದಿಲ್ಲ. ಆದರೆ ಭಾರತೀಯ ಮುಸ್ಲಿಮರಿಗೆ ಇದರ ಪ್ರಾಮುಖ್ಯತೆ ಅರ್ಥವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ ಖೈದಾ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಮುಸ್ಲಿಂ ವಿದ್ಯಾರ್ಥಿ ಮುಸ್ಕಾನ್ ಖಾನ್‍ರನ್ನು ಶ್ಲಾಘಿಸಿದ್ದ. ಇದರಿಂದ ಕರ್ನಾಟಕದಲ್ಲಿ ಹಿಜಬ್ ಗಲಾಟೆ ಮತ್ತೆ ಎದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದರು. ಧಾರ್ಮಿಕ ಬಟ್ಟೆಗಳನ್ನು ನಿರ್ಬಂಧಿಸದಿದ್ದರೆ, ಶಿಕ್ಷಣ ಸಂಸ್ಥೆಗಳು ಧಾರ್ಮಿಕ ನಡವಳಿಕೆಯ ಪ್ರದರ್ಶನಕ್ಕೆ ವೇದಿಕೆಯಾಗುತ್ತವೆ ಎಂದರು.

ನೀವು ಹಿಜಬ್ ಧರಿಸಿದರೆ ನಾನು ಬೇರೆ ಯಾವುದನ್ನಾದರೂ ಧರಿಸುತ್ತೇನೆ ಎನ್ನುತ್ತಾರೆ. ಈ ರೀತಿಯೇ ಶಾಲೆ, ಕಾಲೇಜುಗಳಲ್ಲಿ ನಡೆದರೆ ಧಾರ್ಮಿಕ ಉಡುಪು ಮತ್ತು ಧಾರ್ಮಿಕ ನಡುವಳಿಕೆಯ ಪ್ರದರ್ಶನದ ವೇದಿಕೆಯಾಗುತ್ತದೆ. ಇದರಿಂದ ಶಾಲೆ, ಕಾಲೇಜುಗಳು ಹೇಗೆ ಮುಂದುವರಿಯುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹಲಾಲ್‌ ಆಯ್ತು ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ

ಈ ಎಲ್ಲಾ ಕಾರಣದಿಂದಾಗಿ ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಹಿಂದೂ ಮತ್ತು ಮುಸ್ಲಿಂರ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದರ ಜೊತೆಗೆ ಬಡವ, ಶ್ರೀಮಂತ ಎಂಬ ಮನೋಭಾವವು ಇರುವುದಿಲ್ಲ ಎಂದು ಹೇಳಿದರು.

ಇದೆಲ್ಲವನ್ನು ಅಲ್ ಖೈದಾ ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ನಾವು ಸಮವಸ್ತ್ರವನ್ನು ಧರಿಸಬೇಕು ಎಂಬುದನ್ನು ಭಾರತೀಯ ಮುಸ್ಲಿಮರು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನಗೆ ಖಚಿತವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ

Comments

Leave a Reply

Your email address will not be published. Required fields are marked *