Pushpa 2 ಸಿನಿಮಾ ಚಿತ್ರೀಕರಣದ ವಿಡಿಯೋ ಲೀಕ್

ಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ 2 (Pushpa 2) ಸಿನಿಮಾ ರಿಲೀಸ್‍ಗೂ ಮುನ್ನವೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಪುಷ್ಪ ಪಾರ್ಟ್ 1 ಹಿಟ್ ಆಗಿರೋ ಕಾರಣ ಪಾರ್ಟ್ 2 ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಬೆಟ್ಟದಷ್ಟಿದೆ. ಈ ನಡುವೆ ಪುಷ್ಪ 2 ಸೆಟ್ ವಿಡಿಯೋವೊಂದು ಲೀಕ್ ಆಗಿದೆ. ಭಾಗ 2ರ ಬಗ್ಗೆ ಯಾವುದೇ ಸುಳಿವನ್ನು ತಂಡ ಬಿಟ್ಟು ಕೊಟ್ಟಿರಲಿಲ್ಲ. ಸೆಟ್‍ನ ವಿಡಿಯೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಸುಕುಮಾರ್ (Sukumar) ನಿರ್ದೇಶನದ ಈ ಚಿತ್ರದಲ್ಲಿ ಹೀರೋ, ಸಾಮಾನ್ಯ ವ್ಯಕ್ತಿ ಆಗಿರುವ ಪುಷ್ಪರಾಜ್ ರಕ್ತ ಚಂದನದ ದಂಧೆಯಲ್ಲಿ ಸೇರಿಕೊಳ್ಳುತ್ತಾನೆ. ಆ ಬಳಿಕ ಆತ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ. ಎರಡನೇ ಭಾಗದಲ್ಲಿ ಇದೇ ಕಥೆ ಹೈಲೈಟ್ ಆಗಲಿದೆ. ಇದರ ಜೊತೆ ರಕ್ತ ಚಂದನದ ಕಳ್ಳ ಸಾಗಣೆ ಕಥೆ ಮತ್ತಷ್ಟು ಹೈಲೈಟ್ ಆಗಲಿದೆ. ಸಿನಿಮಾದಲ್ಲಿ ಬಳಕೆ ಆಗುತ್ತಿರುವ ಟ್ರಕ್‍ಗಳೇ ಇದಕ್ಕೆ ಸಾಕ್ಷಿ. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಒಂದು ಸಿಗರೇಟ್ ಪ್ಯಾಕ್‌ಗೆ 1600 ಕೊಟ್ರಾ ಸೋನು ಗೌಡ?

ರಕ್ತ ಚಂದನದ ದಂಧೆಯಲ್ಲಿ ಬೆಳೆದು ನಿಂತ ಮೇಲೆ ಸಿನಿಮಾದಲ್ಲಿ ಏನೆಲ್ಲಾ ತಿರುವು ಇರಲಿದೆ ಎಂಬುದನ್ನ ಪಾರ್ಟ್ 2ನಲ್ಲಿ ತೋರಿಸಲಾಗುತ್ತದೆ. ಪುಷ್ಪ 2 ಸಿನಿಮಾದ ಚಿತ್ರೀಕರಣ ಶುರುವಾದಗಿನಿಂದ ತಂಡದ ಕಡೆಯಿಂದ ಯಾವುದೇ ಅಪ್‍ಡೇಟ್ ಸಿಕ್ಕಿಲ್ಲ. ಸಿನಿಮಾ ಅದೆಷ್ಟರ ಮಟ್ಟಿಗೆ ಕಂಪ್ಲೀಟ್ ಆಗಿದೆ. ಯಾವಾಗ ಬೆಳ್ಳಿತೆರೆಯ ಮೇಲೆ ನೋಡಬಹುದು ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಸದ್ಯ ಲೀಕ್ ಆಗಿರುವ ವಿಡಿಯೋ ನೋಡಿ ಫ್ಯಾನ್ಸ್ ಖುಷಿ ಕೊಟ್ಟಿದ್ದಾರೆ.

ಸದ್ಯ ವಿಡಿಯೋ ಲೀಕ್‌ ಬಗ್ಗೆ ಚಿತ್ರತಂಡ ಆತಂಕಗೊಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಶೂಟಿಂಗ್ ವೇಳೆ ಮತ್ತಷ್ಟು ಬಿಗಿ ಭದ್ರತೆಗೆ ತಂಡ ಪ್ಲ್ಯಾನ್ ಮಾಡಿದೆ.

ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಅನಸೂಯ ಭಾರದ್ವಾಜ್, ಡಾಲಿ ಧನಂಜಯ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]