ದುಬೈನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣ

ತೆಲುಗಿನ ಹೆಸರಾಂತ ನಟ ಅಲ್ಲು ಅರ್ಜುನ್ ಅವರ ಮೇಣದ ಪ್ರತಿಮೆ (Wax statue) ದುಬೈನಲ್ಲಿ ಅನಾವರಣಗೊಂಡಿದೆ. ತಮ್ಮದೇ ಮೇಣದ ಪ್ರತಿಮೆಯನ್ನು ಅಲ್ಲು ಅರ್ಜುನ್ ಅನಾವರಣ ಮಾಡಿದ್ದಾರೆ. ಅದರ ಪಕ್ಕದಲ್ಲೇ ನಿಂತುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದನ್ನು ದುಬೈನ (Dubai) ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಸ್ಥಾಪಿಸಲಾಗಿದೆ.  ಕೆಂಪು ಬಣ್ಣದ ಸೂಟ್ ಧರಿಸಿರುವ ಪ್ರತಿ ಅದಾಗಿದೆ.

ಒಂದು ಕಡೆ ಮೇಣದ ಪ್ರತಿಮೆ ಮತ್ತೊಂದು ಕಡೆ ಅಲ್ಲು ಅರ್ಜುನ್ (Allu Arjun) ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ (Driving License) ಪಡೆದಿದ್ದಾರೆ. ಈ ಲೈಸೆನ್ಸ್ ಪಡೆಯೋಕೆ ಕಾರಣ ಪುಷ್ಪ 2 ಸಿನಿಮಾದ ಶೂಟಿಂಗ್ ಎಂದು ಹೇಳಲಾಗುತ್ತಿದೆ. ಸದ್ಯ ಭಾರತದಲ್ಲೇ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಚೀನಾಗೆ ಹಾರಲಿದೆ ಅಂತೆ. ಅಲ್ಲಿ ಈ ಲೈಸೆನ್ಸ್ ಉಪಯೋಗಕ್ಕೆ ಬರಲಿದೆಯಂತೆ. ಈ ಕಾರಣದಿಂದಾಗಿಯೇ ಅವರು ಆರ್.ಟಿ.ಓ ಆಫೀಸಿಗೆ ತೆರಳಿ, ಪರವಾಣಿಗೆ ಪತ್ರ ಪಡೆದುಕೊಂಡಿದ್ದಾರೆ.

ಈ ನಡುವೆ ಪುಷ್ಪ 2 ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ‘ಪುಷ್ಪ 2’ (Pushpa 2) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪರಾಜ್‌ಗೆ ಜೋಡಿಯಾಗಿರುವ ಶ್ರೀವಲ್ಲಿ ಲುಕ್ ಹೇಗಿದೆ ಎಂಬುದು ಈಗ ರಿವೀಲ್ ಆಗಿದೆ. ಪುಷ್ಪ 2 ಚಿತ್ರೀಕರಣದ ಫೋಟೋ ಲೀಕ್ ಆಗಿದೆ. ರಶ್ಮಿಕಾ ಮಂದಣ್ಣ ನಟಿಸುತ್ತಿರೋ ಶ್ರೀವಲ್ಲಿ ಲುಕ್ ಔಟ್ ಆಗಿದೆ.

ಆಗಿ ಕೋಟಿ ಕೋಟಿ ಲೂಟಿ ಮಾಡಿದೆ. ಹಾಗಾಗಿ ‘ಪುಷ್ಪ 2’ (Pushpa 2) ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. ‘ಪುಷ್ಪ’ ಪಾರ್ಟ್ 2 ಹೇಗೆ ಮೂಡಿ ಬರಲಿದೆ ಎಂದು ಕೌತುಕ ಸೃಷ್ಟಿಸಿರುವಾಗಲೇ ಚಿತ್ರದಲ್ಲಿನ ಶ್ರೀವಲ್ಲಿ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ನಟಿ ರಶ್ಮಿಕಾ ಮಂದಣ್ಣ ಕೆಂಪು ಬಣ್ಣದ ಸೀರೆ, ಆಭರಣ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದ ಸೆಟ್‌ನಲ್ಲಿ ನಟಿಯನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಈ ವಿಡಿಯೋ ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.