ಅಲ್ಲು ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್- ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

– ರಶ್ಮಿಕಾ ಜೊತೆ ಅಲ್ಲು ರೊಮ್ಯಾನ್ಸ್
– ಕನ್ನಡ ಸೇರಿ ಐದು ಭಾಷೆಗಳಲ್ಲಿ ರಿಲೀಸ್

ಹೈದರಾಬಾದ್: ಅಲಾ ವೈಕುಂಠಪುರಮುಲೋ ಚಿತ್ರದ ಯಶಸ್ಸಿನ ಬಳಿಕ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುಂದಿನ ಪ್ರಾಜೆಕ್ಟ್ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಅಲ್ಲದೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬುದರ ಕುರಿತು ಸಹ ಚರ್ಚೆ ನಡೆದಿತ್ತು. ಇದೆಕ್ಕೆಲ್ಲ ಇದೀಗ ತೆರೆ ಬಿದ್ದಿದ್ದು, ಚಿತ್ರದ ಕುರಿತ ಮಾಹಿತಿ ಇದೀಗ ಹೊರ ಬಿದ್ದಿದೆ.

ಅವರ ಮುಂದಿನ ಚಿತ್ರಕ್ಕೆ ಎಎ 20 ಎಂದು ಕರೆಯಲಾಗುತ್ತಿತ್ತು. ಆದರೆ ಚಿತ್ರದ ಹೆಸರು ಇನ್ನೂ ಘೋಷಣೆಯಾಗಿರಲಿಲ್ಲ. ಅಲ್ಲದೆ ನಾಯಕ ನಟಿ ಕುರಿತು ಸಹ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಅಲಾ ವೈಕುಂಠಪುರಮುಲೋ ಚಿತ್ರ ಯಶಸ್ಸಿನ ನಂತರ ಅಲ್ಲು ಅರ್ಜುನ್ ಸ್ವಲ್ಪ ದಿನಗಳ ಕಾಲ ರೆಸ್ಟ್ ನಲ್ಲಿದ್ದರು. ಅಷ್ಟರಲ್ಲೆ ಈ ಕೊರೊನಾ ಮಹಾಮಾರಿ ಒಕ್ಕರಿಸಿಕೊಂಡಿತು. ಹೀಗಾಗಿ ಚಿತ್ರದ ಕಾರ್ಯಗಳು ನಿಧಾನಗತಿಯಲ್ಲಿ ಸಾಗತೊಡಗಿದವು. ಹೀಗಾಗಿ ಎಎ 20 ಚಿತ್ರದ ಟೈಟಲ್ ಘೋಷಣೆಗೆ ತಡವಾಗಿತು.

ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾವನ್ನು ಸುಕುಮಾರ್ ಅವರು ನಿರ್ದೇಶಿಸುತ್ತಿದ್ದು, ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಭರ್ಜರಿ ಗುಫ್ಟ್ ನೀಡಿದೆ. ಚಿತ್ರದ ಟೈಟಲ್ ಘೋಷಣೆ ಮಾಡಲಾಗಿದ್ದು, ಪುಷ್ಪಾ ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ನಾಯಕಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ಈ ಕುರಿತು ಸ್ವತಃ ಅವರೇ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ. ಅಲ್ಲು ಅರ್ಜುನ್ ಅವರ 38ನೇ ಹುಟ್ಟುಹಬ್ಬದಂದು ಚಿತ್ರತಂಡ ಈ ಉಡುಗೊರೆ ನೀಡಿದ್ದು, ಚಿತ್ರ ಇನ್ನೇನು ಸೆಟ್ಟೇರುವುದು ಬಾಕಿ ಇದೆ.

ಏಪ್ರಿಲ್ 8ರಂದು ಸಿನಿಮಾ ಕುರಿತು ಅಪ್‍ಡೇಟ್ ನೀಡಬೇಕಿದೆ ಎಂದು ಸೋಮವಾರ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಘೋಷಿಸಿತ್ತು. ಅದರಂತೆ ಇದೀಗ ಚಿತ್ರದ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿದೆ. ಟ್ವಿಟ್ಟರ್‍ನಲ್ಲಿ ಫಸ್ಟ್ ಲುಕ್ ಪೋಸ್ಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದು, ರಶ್ಮಿಕಾ ಮಂದಣ್ಣ ಸಹ ಫಸ್ಟ್ ಲುಕ್ ಟ್ವೀಟ್ ಮಾಡಿದ್ದಾರೆ.

ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳ ಐದು ಭಾಷೆಗಳಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಬಹುಭಾಷೆಯಲ್ಲಿ ಮೂಡಿ ಬರಲಿದೆ ಎಂಬ ಸುಳಿವನ್ನು ನೀಡಿದ್ದಾರೆ. ಅಲ್ಲು ಅರ್ಜುನ್ ಗಡ್ಡ ಬಿಟ್ಟುಕೊಂಡು ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದು, ಮಾಸ್ ಲುಕ್ ಕೊಟ್ಟಿದ್ದಾರೆ.

ಲಾರಿ ಡ್ರೈವರ್ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳುತ್ತಿದ್ದು, ರಕ್ತ ಚಂದನದ ಜೊತೆಗೆ ಶೇಶಾಚಲಂ ಅರಣ್ಯಾಧಿಕಾರಿಗಳು ಈತನನ್ನು ಹಿಡಿದು ಹಾಕಿರುವ ಭಂಗಿಯಲ್ಲಿ ಪೋಸ್ಟರ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ನಟ ಅಲ್ಲು ಅರ್ಜುನ್ ಚಿತ್ತೂರಿನ ಸ್ಥಳೀಯ ಭಾಷೆಯನ್ನು ಕಲಿತಿದ್ದಾರಂತೆ. ಅಂದಹಾಗೆ ತಮಿಳು ನಟ ವಿಜಯ್ ಸೇತುಪತಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಕಾಶ್ ರೈ, ಜಗಪತಿ ಬಾಬು ಸಹ ಚಿತ್ರದಲ್ಲಿದ್ದಾರೆ. ಜೂನ್‍ನಲ್ಲಿ ಚಿತ್ರೀಕರಣ ಆರಂಭವಾಗಲಿದದೆ ಎಂಬ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *