‘ಪುಷ್ಪ’ ಸಾಂಗ್ ಔಟ್- ಸ್ಟೈಲೀಶ್ ಆಗಿ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್

ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಪುಷ್ಪ ಪುಷ್ಪ ಅಂತ ಸ್ಟೈಲೀಶ್ ಆಗಿ ಅಲ್ಲು ಅರ್ಜುನ್ ಎಂಟ್ರಿ ಕೊಟ್ಟಿದ್ದಾರೆ.

ಸ್ಟೈಲ್ ಆಗಿರುವ ಡ್ರೆಸ್ ತೊಟ್ಟು ಮೈ ತುಂಬಾ ಬಂಗಾರ ಧರಿಸಿ ಸ್ಟೈಲೀಶ್ ಅವತಾರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಎಂಟ್ರಿ ಕೊಟ್ಟಿದ್ದಾರೆ. ‘ಪುಷ್ಪ’ ಟೈಟಲ್ ಸಾಂಗ್‌ನಲ್ಲಿ ನಟ ಅಬ್ಬರಿಸಿದ್ದಾರೆ. ಪುಷ್ಪರಾಜ್‌ರನ್ನು ಹೊಗಳಿ ಹೆಣೆದ ಹಾಡು ಇದಾಗಿದೆ. ಹಾಡು ಕೇಳಿದ ಮ್ಯೂಸಿಕ್‌ ಪ್ರಿಯರಿಗೆ ಈ ಸಾಂಗ್‌ ಕಿಕ್‌ ಕೊಡುತ್ತಿದೆ.

ರಕ್ತ ಚಂದನದ ಕುರಿತು ಕಥೆ ಇದಾಗಿರೋದ್ರಿಂದ ಕಥೆ ಕನೆಕ್ಟ್ ಆಗುವ ಪ್ರಾಪರ್ಟಿಗಳನ್ನು ಪುಷ್ಪರಾಜ್ ಸುತ್ತ ತೋರಿಸಿದ್ದಾರೆ. ಅಲ್ಲು ಅರ್ಜುನ್ ಅವರು ಮೊದಲೇ ಸೂಪರ್ ಡ್ಯಾನ್ಸರ್ ಇಂತಹ ಮಸ್ತ್ ಹಾಡು ಅವರಿಗೆ ಹೇಳಿ ಮಾಡಿಸಿದ ಹಾಗಿದೆ. ಇನ್ನೂ ಈ ಸಾಂಗ್ ರಿಲೀಸ್ ಆದ ಕೆಲವೇ ಸಮಯದಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿದೆ. ಇದನ್ನೂ ಓದಿ:ಪ್ರಜ್ವಲ್ ಪ್ರಕರಣ ಮಾನವ ಕುಲಕ್ಕೆ ಕಳಂಕ ಎಂದ ನಿರ್ದೇಶಕ ಎಸ್.ನಾರಾಯಣ್

ಅಂದಹಾಗೆ, ಪುಷ್ಪ 2 ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್‌ಗೆ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗುತ್ತಿದೆ.