ಮುಂದೆ ಸಮ್ಮಿಶ್ರ ಸರ್ಕಾರಗಳೇ ಹೆಚ್ಚಾಗಲಿವೆ, ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು: ಸಚಿವ ವೆಂಕಟರಾವ್ ಗೌಡ

ರಾಯಚೂರು: ಸಮ್ಮಿಶ್ರ ಸರ್ಕಾರ ಇದೇ ಮೊದಲಲ್ಲಾ, ಮುಂದೆ ಸಮ್ಮಿಶ್ರ ಸರ್ಕಾರಗಳೇ ಹೆಚ್ಚಾಗುತ್ತವೆ. ಇದಕ್ಕೆ ಹೊಂದಿಕೊಂಡು ಹೋಗುವುದನ್ನ ಕಲಿಯಬೇಕು. ನಾವು ಐದು ವರ್ಷಗಳನ್ನ ಪೂರೈಸುತ್ತವೆ. ಹೇಗೆ ಪೂರೈಸುತ್ತೀರಿ ಅಂತ ಸದ್ಯ ಕೇಳಬೇಡಿ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ಸಿದ್ದರಾಮಯ್ಯನವರು ಹಳೆ ಬಜೆಟ್ ಮುಂದುವರೆಸಬಹುದು ಎಂದಿದ್ದಾರೆ. ಆದ್ರೆ ಹೊಸ ಬಜೆಟ್ ಮಂಡಿಸಬಾರದು ಅಂತ ಹೇಳಿಲ್ಲ. ಜುಲೈ 5 ರಂದು ಬಜೆಟ್ ಮಂಡನೆಯಾಗುತ್ತದೆ. ಧರ್ಮಸ್ಥಳಲ್ಲಿ ಸಿದ್ದರಾಮಯ್ಯ ಚಿಕಿತ್ಸೆ ಪಡೆಯುತ್ತಿದ್ದರಿಂದ ಅವರ ನಾಯಕನನ್ನ ಭೇಟಿಯಾಗಲು ಕಾಂಗ್ರೆಸ್ ಶಾಸಕರು ಹೋಗಿದ್ದಾರೆ ಅಷ್ಟೇ ,ಅದರಲ್ಲಿ ಗೊಂದಲವೇನು ಇಲ್ಲಾ ಎಂದು ಸ್ಪಷ್ಟಪಡಿಸಿದರು.

ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡ ವೈದ್ಯರು ಕೂಡಲೇ ಮಾತೃ ಇಲಾಖೆಗೆ ಮರಳಬೇಕು. ವಾಪಸ್ಸಾಗದ ವೈದ್ಯರನ್ನ ಮನೆಗೆ ಕಳುಹಿಸಲಾಗುವುದು. ವೈದ್ಯರ ಪರವಾಗಿ ನಾನಾ ಕಡೆಯಿಂದ ಒತ್ತಡ ಬರುತ್ತಿದೆ. ಯಾವ ಒತ್ತಡಕ್ಕೂ ಮಣಿಯಲ್ಲ 54 ಜನ ವೈದ್ಯರು ಮರಳಲೇಬೇಕು ಎಂಬ ವಿಷಯ ಕುರಿತು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ತಿಳಿಸಿದರು.

ಗೋಹತ್ಯೆ ಕಾಯಿದೆ ಮೊದಲಿನಿಂದಲೂ ಜಾರಿಯಲ್ಲಿದ್ದು, ಗೊಂದಲ ಸೃಷ್ಠಿ ಮಾಡಬಾರದು. ಗೊಡ್ಡು ದನಗಳನ್ನ ಸಾಕುವುದು ರೈತರಿಗೂ ಕಷ್ಟವಾಗುವದರಿಂದ ಅನಿವಾರ್ಯವಾಗಿ ಕಟುಕರಿಗೆ ದನಗಳನ್ನ ಮಾರುತ್ತಿದ್ದಾರೆ. ಅಂತಹ ದನಗಳನ್ನ ಸಾಕಲು ಗೋ ಶಾಲೆಗಳ ಸ್ಥಾಪನೆಗೆ ಕ್ರಮಗೊಳ್ಳುತ್ತೇವೆ ಅಂತ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

Comments

Leave a Reply

Your email address will not be published. Required fields are marked *