ದ್ವಿತೀಯ ಹಂತ ಮುಗಿಸಿದ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’

ಬೆಂಗಳೂರು: ಜನನಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಮುಕ್ತಾಯಗೊಂಡಿತು.

8 ದಿವಸಗಳ ಕಾಲ ನಡೆದ ಚಿತ್ರೀಕರಣದಲ್ಲಿ ನಟ ಶೌರ್ಯ ಹಾಗೂ ತ್ರಿವೇಣಿಕೃಷ್ಣ ಅಭಿನಯಿಸಿದ ಹಲವಾರು ಸನ್ನಿವೇಶಗಳನ್ನು ಸತೀಶ್ ರಾಜೇಂದ್ರನ್ ಛಾಯಾಗ್ರಹಣದಲ್ಲಿ ನಿರ್ದೇಶಕ ರತ್ನತೀರ್ಥ ಚಿತ್ರಿಸಿಕೊಂಡರು. ಚಿತ್ರದ ತೃತೀಯ ಹಂತದ ಚಿತ್ರೀಕರಣವು ಬರುವ ವಾರ ಸಕಲೇಶಪುರದಲ್ಲಿ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರಕ್ಕೆ ಪ್ರಶಾಂತ್ ವೈ.ಎನ್. ಅಭಿನಂದನ್ ದೇಶಪ್ರಿಯ ಸಂಭಾಷಣೆ, ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ನಾಗಭೂಷಣ್ ಸಾಹಿತ್ಯ, ವಿಜಯ್ ರಾಜ್ ಸಂಗೀತ, ಉಜ್ವಲ್ ಗೌಡ ಸಂಕಲನ, ಪ್ರದೀಪ್ ನಿರ್ಮಾಣ ನಿರ್ವಹಣೆ, ಬಾಬುಖಾನ್ ಕಲೆ, ಸಿದ್ದು ನಿರ್ದೇಶನ ಸಹಕಾರವಿದ್ದು, ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ರತ್ನತೀರ್ಥ.

ತಾರಾಗಣದಲ್ಲಿ ತ್ರಿವೇಣಿಕೃಷ್ಣ, ಶೌರ್ಯ, ಶಂಕರ್ ಅಶ್ವತ್ಥ್, ನಿಖಿಲ್‍ಗೌಡ, ಸುಮಂತ್, ಭಾರತಿ, ರಘುರಾಮನ್, ಧನು ಮುಂತಾದವರಿದ್ದಾರೆ.

Comments

Leave a Reply

Your email address will not be published. Required fields are marked *