ಅಯೋಧ್ಯೆ: ನಮಾಜ್‍ಗೆ ಮನವಿ ಸಲ್ಲಿಸಿ 5 ಲಕ್ಷ ರೂ. ದಂಡಕ್ಕೆ ಗುರಿಯಾದ್ರು

ಲಕ್ನೋ: ಅಯೋಧ್ಯೆ ರಾಮ ಮಂದಿರ ನಿರ್ಮಾಣದ ವಿವಾದಿತ ಜಾಗದಲ್ಲಿ ನಮಾಜ್‍ಗೆ ಅವಕಾಶ ಕೋರಿದ್ದ ಅರ್ಜಿದಾರರಿಗೆ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ 5 ಲಕ್ಷ ರೂ.ಗಳ ದಂಡ ವಿಧಿಸಿದೆ.

ಅಲ್ ರಹಮಾನ್ ಟ್ರಸ್ಟ್ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ವಿವಾದಿತ ಜಾಗದಲ್ಲಿ ನಮಾಜ್‍ಗೆ ಅವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ನ್ಯಾಯಮೂರ್ತಿ ಡಿ.ಕೆ ಅರೋರಾ ಮತ್ತು ಅಲೋಕ್ ಮಾಥುರ್ ದ್ವಿಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಸಿ ಅರ್ಜಿ ವಜಾಗೊಳಿಸಿದೆ.

ಅರ್ಜಿದಾರರು ಪ್ರಚಾರಕ್ಕಾಗಿ ಕೆಟ್ಟ ದಾರಿ ಹಿಡಿದಿದ್ದಾರೆ. ಇನ್ನು ಮುಂದೆ ಪ್ರಚಾರಕ್ಕೆ ಯಾರೂ ಈ ರೀತಿ ಅರ್ಜಿ ಸಲ್ಲಿಸಿ ಕೋರ್ಟ್ ಕಲಾಪದ ಸಮಯವನ್ನು ಹಾಳು ಮಾಡಬಾರದು ಎಂದು ಕಿಡಿಕಾರಿದ ಕೋರ್ಟ್, 5 ಲಕ್ಷ ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿತು.

ಒಂದು ವೇಳೆ ಅಲ್ ರಹಮಾನ್ ಟ್ರಸ್ಟ್ ದಂಡ ಪಾವತಿಸಲು ವಿಫಲವಾದರೆ, ಅದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಫೈಜಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಸೂಚನೆ ನೀಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *