ಕಾಲೇಜು ಪ್ರವೇಶ ಶುಲ್ಕ ಪಾವತಿಸಿ ದಲಿತ ವಿದ್ಯಾರ್ಥಿನಿಗೆ ನೆರವಾದ ನ್ಯಾಯಾಧೀಶ

ಲಕ್ನೋ: ವಾರಣಾಸಿಯ ಐಐಟಿ-ಬಿಎಚ್‌ಯುನಲ್ಲಿ ಪ್ರವೇಶಾತಿಗೆ ಶುಲ್ಕ ಕಟ್ಟಲಾಗದೇ ಆರ್ಥಿಕ ಸಮಸ್ಯೆಯಿಂದ ಕಂಗಾಲಾಗಿದ್ದ ದಲಿತ ಸಮುದಾಯದ ವಿದ್ಯಾರ್ಥಿನಿಗೆ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು ಹಣಕಾಸಿನ ನೆರವು ನೀಡಿ ಗಮನ ಸೆಳೆದಿದ್ದಾರೆ.

ನ್ಯಾಯಾಧೀಶರಾದ ದಿನೇಶ್‌ ಕುಮಾರ್‌ ಸಿಂಗ್‌ ಅವರು, ಬಡ ವಿದ್ಯಾರ್ಥಿನಿ ಸಂಸ್ಕೃತಿ ರಂಜನ್‌ಗೆ ಅಗತ್ಯವಿದ್ದ 15,000 ರೂ. ನೀಡಿ ಆಕೆಯ ಶೈಕ್ಷಣಿಕ ಬದುಕಿಗೆ ಸಹಾಯ ಮಾಡಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಗೆ ಪ್ರವೇಶಾತಿ ನೀಡುವಂತೆ ಐಐಟಿ-ಬಿಎಚ್‌ಯು ಆಡಳಿತ ಮಂಡಳಿಗೆ ಸೂಚನೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ ಸಿಇಒ ಪರಾಗ್‌ ಅಗರ್‌ವಾಲ್‌ ಸಿಗುತ್ತೆ ಕೋಟಿಗಟ್ಟಲೇ ಸಂಬಳ + ಬೋನಸ್‌

ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಸಂಸ್ಕೃತಿ ರಂಜನ್‌, ಜಂಟಿ ಪ್ರವೇಶ ಪರೀಕ್ಷೆಯಲ್ಲಿ 1,469ನೇ ರ‍್ಯಾಂಕ್‌ ಪಡೆದಿದ್ದರು. ಅಲ್ಲದೇ ಐಐಟಿ-ಬಿಎಚ್‌ಯು ನಲ್ಲಿ ಸೀಟು ಕೂಡ ಲಭಿಸಿತ್ತು. ಆದರೆ ಪ್ರವೇಶಾತಿಗೆ ಅಗತ್ಯವಿದ್ದ ಶುಲ್ಕವನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ತಂದೆಯ ಅನಾರೋಗ್ಯದ ಕಾರಣ ಆರ್ಥಿಕ ಸಮಸ್ಯೆಯಿಂದಾಗಿ ವಿದ್ಯಾರ್ಥಿನಿ ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯದಲ್ಲಿ ಮನವರಿಕೆ ಮಾಡಿದ್ದರು. ಇದನ್ನೂ ಓದಿ: GDP: ಜುಲೈ-ಸೆಪ್ಟೆಂಬರ್‌ 2ನೇ ತ್ರೈಮಾಸಿಕದಲ್ಲಿ ಶೇ. 8.4ರಷ್ಟು ಬೆಳವಣಿಗೆ

ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಸಂಸ್ಕೃತಿ ರಂಜನ್‌, 10 ಮತ್ತು 12ನೇ ತರಗತಿಯಲ್ಲಿ ಕ್ರಮವಾಗಿ ಶೇ. 95.6 ಮತ್ತು ಶೇ. 94 ಅಂಕ ಪಡೆದಿದ್ದರು. ನಂತರ ಐಐಟಿಗಳಲ್ಲಿ ಆಯ್ಕೆಗಾಗಿ ನಡೆಸುವ ಜಂಟಿ ಪ್ರವೇಶ ಪರೀಕ್ಷೆಗೂ ಹಾಜರಾಗಿದ್ದರು. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಶೇ. 92.77 ಅಂಕಗಳನ್ನು ಪಡೆದಿದ್ದರು.

Comments

Leave a Reply

Your email address will not be published. Required fields are marked *