ಆಲಿಯಾ ಭಟ್ ಪ್ರೆಗ್ನೆಂಟ್: ಇಷ್ಟು ಬೇಗ ಮಗುನಾ ಅಂದ ಅಭಿಮಾನಿಗಳು

ಟಿ ಆಲಿಯಾ ಭಟ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ತಾವು ತಾಯಿಯಾಗುತ್ತಿರುವ ಖುಷಿಯ ವಿವಾರವನ್ನು ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಹೇಳಿಕೊಂಡಿದ್ದಾರೆ.

ಹಲವು ವರ್ಷಗಳ ಡೇಟಿಂಗ್ ನಂತರ ಏಪ್ರಿಲ್ 14ರಂದು ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಮದುವೆಯಾದ ಏರಡುವರೆ ತಿಂಗಳಾಗಿದ್ದು, ಈಗ ಫ್ಯಾನ್ಸ್‌ಗೆ ಆಲಿಯಾ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆಲಿಯಾ ಭಟ್ ಪ್ರೆಗ್ನೆಂಟ್ ಆಗಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಆಲಿಯಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ದುಬೈಗೆ ಹಾರಿದ ಸಮಂತಾ: ಸ್ನೇಹಿತೆಯರ ಜೊತೆ ನೈಟ್ ಔಟ್ 

ನಟಿ ಆಲಿಯಾ ಬಿಟೌನ್‌ನ ಸಕ್ಸಸ್‌ಫುಲ್ ನಾಯಕಿ, ಜತೆಗೆ ಪ್ಯಾನ್ ಇಂಡಿಯಾ ನಾಯಕಿಯಾಗಿ ಸಿಕ್ಕಾಪಟ್ಟೆ ಬೇಡಿಕೆಯಿರುವಾಗಲೇ ಹಸೆಮಣೆ ಏರಿದ್ದರು. ಈಗ ಆಲಿಯಾ ಕಪೂರ್‌ ಕುಟುಂಬಕ್ಕೆ ಗುಡ್‌ ನ್ಯೂಸ್‌  ಕೊಟ್ಟಿದ್ದಾರೆ. ತಾಯಿಯಾಗುತ್ತಿರುವ ಕ್ಷಣವನ್ನ ಏಂಜಾಯ್ ಮಾಡ್ತಿದ್ದಾರೆ. ಕೈತುಂಬಾ ಸಿನಿಮಾಗಳಿರುವಾಗ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

 

View this post on Instagram

 

A post shared by Alia Bhatt ????☀️ (@aliaabhatt)

ಸಾಲು ಸಾಲು ಸಿನಿಮಾಗಳಿರುವಾಗ ಮದುವೆ, ಸಂಸಾರ, ಮಗುವಿನ ಆರೈಕೆಯತ್ತ ಆಲಿಯಾ ಮನಸ್ಸು ಮಾಡಿದ್ದಾರೆ. ಒಟ್ನಲ್ಲಿ ಆಲಿಯಾ ಖುಷಿ ನೋಡಿ ಫ್ಯಾನ್ಸ್, ಚಿತ್ರರಂಗದ ಸ್ನೇಹಿತರು ಶುಭಹಾರೈಸುತ್ತಿದ್ದಾರೆ.

Live Tv

Comments

Leave a Reply

Your email address will not be published. Required fields are marked *