ಆತಂಕದಿಂದ ಲಗೇಜ್ ತೆಗೆದುಕೊಂಡು ಎಲ್ಲಿಗೆ ಓಡಿದರು ಆಲಿಯಾ ಭಟ್

ಬಾಲಿವುಡ್ ಲವ್‌ಬರ್ಡ್ಸ್ ರಣಬೀರ್‌ ಕಪೂರ್ ಮತ್ತು ಆಲಿಯಾ ಭಟ್ ಏ.೧೪ರಂದು ಮದುವೆಯಾಗಿ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟಿದ್ದಾರೆ. ಮದುವೆಯಾಗಿ ಎರಡೇ ದಿನಕ್ಕೆ ಈ ಜೋಡಿ ತಮ್ಮ ವೃತ್ತಿಜೀವನದ ಕಡೆ ಗಮನ ಹರಿಸಿದ್ದಾರೆ. ಪ್ರಸ್ತುತ ಆಲಿಯಾ ಅವರು ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಈ ನಟಿಯ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಆಲಿಯಾ ವಿಮಾನ ನಿಲ್ದಾಣದಲ್ಲಿ ತುಂಬ ಗಾಬರಿಯಿಂದ ಓಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಆಲಿಯಾ, ಟ್ರಾಲಿಯಲ್ಲಿ ಲಗೇಜ್ ಹಾಕಿಕೊಂಡು ಓಡುತ್ತಿರುವ ದೃಶ್ಯ ಸೆರೆಯಾಗಿದೆ. ವೀಡಿಯೋ ನೋಡಿದ ಅಭಿಮಾನಿಗಳು, ಏನಾಯಿತು? ಅವರೇನಾದರೂ ಫ್ಲೈಟ್ ಮಿಸ್ ಮಾಡಿಕೊಂಡ್ರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಸಿನಿಮಾದಲ್ಲಿ ಶಿವರಾಜ್ ಕುಮಾರ್: ಏನಿದು ಭರ್ಜರಿ ಕಾಂಬಿನೇಷನ್?

ಆದರೆ ಅಸಲಿ ಕಹಾನಿ ಬೇರೆಯೇ ಇದೆ. ಆಲಿಯಾ ಗಾಬರಿಯಿಂದ ವಿಮಾನ ನಿಲ್ದಾಣಕ್ಕೆ ಓಡಿ ಬರುವುದು ಸಿನಿಮಾದ ದೃಶ್ಯ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಶೂಟಿಂಗ್ ವೇಳೆ ತೆಗೆದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಇದು ಸಖತ್ ವೈರಲ್ ಆಗಿದೆ. ಈ ವೀಡಿಯೋಗೆ ಅಭಿಮಾನಿಗಳು ಫುಲ್ ಪ್ರತಿಕ್ರಿಯೆ ಕೊಡುತ್ತಿದ್ದಾರೆ.

ಆಲಿಯಾಗೆ ಸಿನಿರಂಗದಲ್ಲಿ ಬೇಡಿಕೆ ಹೆಚ್ಚು. ‘RRR’ ಸಿನಿಮಾ ಗೆದ್ದ ಮೇಲೆ ಆಲಿಯಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ರಣವೀರ್ ಜೊತೆ ಈ ನಟಿ  2 ನೇ ಬಾರಿಗೆ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಕುತುಹಲ ಮೂಡಿಸಿದೆ. ಅಲ್ಲದೇ ಈ ಸಿನಿಮಾದಲ್ಲಿ ಕರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಎಲ್ಲಕಡೆ ಹಬ್ಬಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಬಾದ್‌ಷಾ, ಸೂಪರ್ ಹಿಟ್ ಜೋಡಿ ಶಾರೂಖ್ ಮತ್ತು ಕಾಜೋಲ್ ಸಹ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದನ್ನೂ ಓದಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

ಈ ಎಲ್ಲ ಕಾರಣಗಳಿಂದ ಸಿನಿಮಾ ಬಗ್ಗೆ ಎಲ್ಲರಲ್ಲಿಯೂ ಕುತೂಹಲ ಹೆಚ್ಚಾಗುವಂತೆ ಮಾಡುತ್ತಿದೆ.

Comments

Leave a Reply

Your email address will not be published. Required fields are marked *