ಕಿಂಡಿ ಕೊರೆದು, ಸಿಸಿಟಿವಿಗೆ ಪೇಪರ್ ಗ್ಲಾಸ್ ಕವರ್ ಮಾಡಿ ಮದ್ಯ ಕಳವು

– ಕುಡುಕನ ಮಾಸ್ಟರ್ ಪ್ಲಾನ್

ಚಿಕ್ಕಬಳ್ಳಾಪುರ: ಲಾಕ್‍ಡೌನ್‍ನಿಂದ ಮದ್ಯ ಪ್ರಿಯರು ಪ್ರತಿದಿನ ಪರದಾಡುತ್ತಿದ್ದಾರೆ. ಇತ್ತ ಸರ್ಕಾರ ಮತ್ತೆ ಲಾಕ್‍ಡೌನ್ ಮುಗಿಯವರೆಗೂ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಈ ಮಧ್ಯೆ ಕಳ್ಳನೊಬ್ಬ ಮದ್ಯದಂಗಡಿಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

ನಗರದ ಮುಖ್ಯರಸ್ತೆ ಬಿಬಿ ರಸ್ತೆಯ ಮಾಲೀಕ ರಮೇಶ್ ಎಂಬವರಿಗೆ ಸೇರಿದ ಬಾಲಾಜಿ ವೈನ್ಸ್ ಸ್ಟೋರ್ ನಲ್ಲಿ ಕಳವು ನಡೆದಿದೆ. ವೈನ್ ಶಾಪ್ ಹಿಂಭಾಗದಲ್ಲಿ ಕಿಂಡಿ ಕೊರೆದು ಕಳ್ಳ ಓಳನುಗ್ಗಿದ್ದಾನೆ. ಬಳಿಕ ಮದ್ಯದ ಬಾಟಲ್‍ಗಳನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದಾರೆ.

ಅಷ್ಟೇ ಅಲ್ಲದೇ ಕಳ್ಳ ಕ್ಯಾಶ್ ಕೌಂಟರ್ ಲ್ಲಿದ್ದ ಸಿಸಿಟಿವಿಗೆ ಪೇಪರ್ ಗ್ಲಾಸ್ ಕವರ್ ಮಾಡಿ ತನ್ನ ಮುಖ ಕಾಣದಂತೆ ಎಚ್ಚರಿಕೆ ವಹಿಸಿದ್ದಾನೆ. ಇಂದು ಬೆಳಗ್ಗೆ ಸ್ಥಳೀಯರು ನೋಡಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು ಹಾಗೂ ಅಬಕಾರಿ ಇಲಾಖಾಧಿಕಾರಿಗಳು ವೈನ್ ಶಾಪ್ ಬೀಗಮುದ್ರೆ ತೆಗೆದು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಪೊಲೀಸರು ಸ್ಟಾಕ್ ಚೆಕ್ ಮಾಡುತ್ತಿದ್ದು, ಎಷ್ಟು ಮದ್ಯ ಕಳವಾಗಿದೆ ಎಂಬುದು ಗೊತ್ತಾಗಬೇಕಿದೆ.

Comments

Leave a Reply

Your email address will not be published. Required fields are marked *