ಆಳಂದ ಫೈಲ್ಸ್ ಬಹಿರಂಗ – ರಾಹುಲ್ ಗಾಂಧಿ ಜೊತೆ ದೃಢವಾಗಿ ನಿಲ್ಲುತ್ತೇನೆ: ಡಿಕೆಶಿ

ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ಅವರ ಮತಗಳ್ಳತನ ಆರೋಪದ ಜೊತೆಗೆ ನಾನು ದೃಢವಾಗಿ ನಿಲ್ಲುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

ಆಳಂದ (Aland) ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆರೋಪದ ಬಗ್ಗೆ ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ರಾಹುಲ್ ಗಾಂಧಿ ಅವರ ಜೊತೆ ದೃಢವಾಗಿ ನಿಲ್ಲುತ್ತೇನೆ. ಭಾರತದ ಜನ ಪಾರದರ್ಶಕತೆ, ನ್ಯಾಯಸಮ್ಮತತೆಗೆ ಅರ್ಹರು. ಆದರೆ ಮತದಾರರನ್ನು ಗುರಿಯಾಗಿಸಿಕೊಂಡು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಗುಪ್ತ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದಿದ್ದಾರೆ.ಇದನ್ನೂ ಓದಿ: EC ಮೊಬೈಲ್‌ ಸಂಖ್ಯೆ, ಐಪಿ ವಿಳಾಸ ನೀಡಿದ್ರೂ ಕರ್ನಾಟಕದ ಸಿಐಡಿ ಏನು ಮಾಡುತ್ತಿದೆ: ಅನುರಾಗ್‌ ಠಾಕೂರ್‌ ಪ್ರಶ್ನೆ

ಕಾಂಗ್ರೆಸ್‌ನ ಬಲಿಷ್ಠ ಬೂತ್‌ಗಳಲ್ಲಿ ಕಾನೂನುಬದ್ಧ ಮತಗಳನ್ನು ಅಳಿಸಲು ಸಾಫ್ಟ್‌ವೇರ್‌, ಹೊರಗಿನವರ ಹಸ್ತಕ್ಷೇಪ ಬಳಕೆ ಆಳಂದ ಕ್ಷೇತ್ರದ ಸಾಕ್ಷಿಗಳಿಂದ ಗೊತ್ತಾಗುತ್ತದೆ. ಇದು ಆಘಾತಕಾರಿ. ಜನರ ಧ್ವನಿಯನ್ನು ಅಡಗಿಸಲು ಉದ್ದೇಶಪೂರ್ವಕ ಮತ್ತು ಯೋಜಿತ ಪ್ರಯತ್ನವಾಗಿದೆ. ನಾವು ನಮ್ಮ ಧ್ವನಿ ಎತ್ತುವುದನ್ನ, ದಾಖಲೆಗಳನ್ನ ಬಹಿರಂಗಪಡಿಸುವುದನ್ನ ಮುಂದುವರಿಸುತ್ತೇವೆ, ವೋಟ್ ಚೋರಿ ಫ್ಯಾಕ್ಟರಿ ಎಂದು ಬರೆದುಕೊಂಡಿದ್ದಾರೆ.

ಗುರುವಾರ (ಸೆ.18) ನವದೆಹಲಿಯಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ. ಆಳಂದ ಕ್ಷೇತ್ರದಲ್ಲಿ 2023ರ ಎಲೆಕ್ಷನ್ ವೇಳೆ 6018 ಮತದಾರರನ್ನ ಡಿಲೀಟ್ ಮಾಡಲು ಯತ್ನಿಸಿದ್ದರು ಎಂದು ದೂರಿದ್ದಾರೆ. ಬೇರೆ ರಾಜ್ಯಗಳ ಫೋನ್ ನಂಬರ್ ಬಳಕೆ ಮಾಡಲಾಗಿದೆ. ಕಾಂಗ್ರೆಸ್ ವೋಟ್‌ಗಳನ್ನೇ ಟಾರ್ಗೆಟ್ ಮಾಡಲಾಗಿದೆ. ಸೂರ್ಯಕಾಂತ್ ಹೆಸರು ಬಳಸಿ 14 ನಿಮಿಷದಲ್ಲಿ 12 ವೋಟ್ ಡಿಲೀಟ್ ಮಾಡಲಾಗಿದೆ. ಕಾಂಗ್ರೆಸ್ ಬಲವಾಗಿರುವ ಬೂತ್‌ಗಳನ್ನೇ ಟಾರ್ಗೆಟ್ ಮಾಡಿ ಮತಗಳ್ಳತನ ಮಾಡಲಾಗಿದೆ ಎಂದಿದ್ದಾರೆ.ಇದನ್ನೂ ಓದಿ: ಸಾಫ್ಟ್‌ವೇರ್‌ ಬಳಸಿ ಆಳಂದದಲ್ಲಿ 6018 ಮತದಾರರು ಡಿಲೀಟ್: ರಾಹುಲ್‌ ಗಾಂಧಿ ಬಾಂಬ್‌