ಮತ್ತೊಂದು ಕ್ರಷರ್ ದುರಂತ- ನೂರು ಅಡಿ ಆಳಕ್ಕೆ ಬಿದ್ದು ಕಾರ್ಮಿಕ ದುರ್ಮರಣ

ತುಮಕೂರು: ಜಿಲ್ಲೆಯಲ್ಲಿ ಕಲ್ಲಿನ ಕ್ವಾರಿಗಳು ಕಾರ್ಮಿಕರ ಪಾಲಿಗೆ ಶವಾಗಾರಗಳಾಗುತ್ತಿವೆ. ಸಾಲು ಸಾಲಾಗಿ ಕ್ರಷರ್ (Stone Crusser) ಕಾರ್ಮಿಕರು ಕ್ರಷರ್‍ನಲ್ಲೇ ಬಲಿಯಾಗ್ತಿದ್ದು, ಪ್ರಶ್ನಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ (Department of Mines and Earth Sciences) ಗಾಢ ನಿದ್ರೆಗೆ ಜಾರಿದೆ. ಈ ಸಾಲಿಗೆ ಈಗ ಮತ್ತೊಂದು ಅವಘಡ ಸೇರ್ಪಡೆಯಾಗಿದ್ದು, ಕಾರ್ಮಿಕರ ಜೀವಗಳಿಗೆ ಬೆಲೆನೇ ಇಲ್ಲಂದಂತಾಗಿದೆ.

ಕಲ್ಪತರ ನಾಡು ತುಮಕೂರು ಜಿಲ್ಲೆಯಲ್ಲಿ ಕ್ವಾರಿಗಳಿಗೆ ಲಂಗು ಲಗಾಮು ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಕ್ರಷರ್‍ಗಳಲ್ಲಿ ಸಾಲು-ಸಾಲು ಸಾವು ಸಂಭವಿಸುತ್ತಿದ್ದು, ಈಗ ಮತ್ತೊಬ್ಬ ಕಾರ್ಮಿಕ (Worker) ಸಾವನ್ನಪ್ಪಿದ್ದಾನೆ. ಬದುಕು ಅರಸಿ ಊರು ಬಿಟ್ಟು ಊರು, ಜಿಲ್ಲೆ ಬಿಟ್ಟು ಜಿಲ್ಲೆಗೆ ಬಂದ ಬಡಪಾಯಿ ಕುಟುಂಬ (Family) ಬೀದಿಗೆ ಬಿದ್ದಿದೆ. ಇದನ್ನೂ ಓದಿ: ಬಂಧಿತ ಶಂಕಿತ ಉಗ್ರ ಮಾಝ್ ತಂದೆ ನಿಧನ

ಮೂಲತಃ ಕೊಳ್ಳೆಗಾಲದವರಾದ ಈರಣ್ಣ ಎಂಬವರು ತುಮಕೂರು ತಾಲೂಕಿನ ಹೊಸಳ್ಳಿಯಲ್ಲಿರೋ ಅಕ್ಷಯ ಸ್ಟೋನ್ ಕ್ರಷರ್‍ನಲ್ಲಿ ಕೆಲಸ ಮಾಡುತ್ತಿದ್ದರು,. ಅದರಂತೆ ನಿನ್ನೆ ಕ್ರಷರ್‍ನಲ್ಲಿ ಹಗ್ಗದ ಮೂಲಕ ಕಡಿದಾದ ಬಂಡೆ ಹತ್ತಿದ್ದ ಈರಣ್ಯ ಅಪಾಯವನ್ನ ಲೆಕ್ಕಿಸದೆ ರಂದ್ರ ಕೊರೆಯುತ್ತಿದ್ದರು. ಆದರೆ ಈ ವೇಳೆ ಕಾಲು ಜಾರಿದ ಈರಣ್ಣ ಸುಮಾರು ನೂರು ಅಡಿ ಕೆಳಕ್ಕೆ ಬಿದ್ದು ಅಸುನೀಗಿದ್ದಾರೆ. ಈ ದುರ್ಘಟನೆಯಲ್ಲಿ ಕಾರ್ಮಿಕನ ದೇಹ ಛಿದ್ರ-ಛಿದ್ರವಾಗಿದ್ದು, ದುರಂತಕ್ಕೆ ಸಾಕ್ಷಿಯಾಗಿತ್ತು.

ಈರಣ್ಣನ ಸಾವೇನು ಅಕ್ಷಯ ಕ್ರಷರ್ ನಲ್ಲಿ ಮೊದಲ ಸಾವಲ್ಲ. ಕಳೆದ ನಾಲ್ಕು ತಿಂಗಳ ಹಿಂದೆ ಬಿಹಾರ ಮೂಲದ ಕಾರ್ಮಿಕ ಇದೇ ರೀತಿ ಇಲ್ಲಿ ಸಾವನ್ನಪ್ಪಿದ್ದ. ಆಗ ಕ್ರಷರ್ ಮಾಲೀಕರು ಮಾತುಕತೆ ಮೂಲಕ ಪ್ರಕರಣ ಮುಚ್ಚಿ ಹಾಕಿದ್ರು. ಇಷ್ಟಾದ್ರೂ ಈಗ ಕ್ರಷರ್‍ನಲ್ಲಿ ಮತ್ತೊಂದು ಸಾವಾಗಿದೆ. ಕಾರ್ಮಿಕರಿಗೆ ಯಾವುದೇ ಮುಂಜಾಗೃತಾ ಸಾಧನ ನೀಡದಿರುವುದೇ ಈ ಸಾವಿನ ಸರಣಿಗೆ ಕಾರಣವಾಗಿದ್ದು, ಸುತ್ತ ಮುತ್ತಲಿನ ಊರಿನವರಿಗೂ ಅಕ್ಷಯ್ ಕ್ರಷರ್ ಸಂಚಕಾರ ತಂದೊಡ್ಡಿದೆ.

ಅಕ್ಷಯ ಕ್ರಷರ್ ನಿಂದ ಹೊಸಳ್ಳಿ ಗ್ರಾಮದ ಜನರ ಮನೆಗಳೂ ಬಿರುಕು ಬಿಟ್ಟಿವೆ. ದನಕರುಗಳು, ಕುರಿಗಳನ್ನು ಮೇಯಿಸಲು ಅಡ್ಡಿಯಾಗುತ್ತಿದೆ. ಇಷ್ಟಾದ್ರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮವಹಿಸಿಲ್ಲ. ಸದ್ಯ ಅಪಾಯ ತಂದೊಡ್ಡುವ ಕ್ರಷರ್ ಗಳನ್ನು ಮುಚ್ಚುವಂತೆ ಇಲ್ಲಿನ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *