ತೇಜ್ ಪ್ರತಾಪ್ ಯಾದವ್ ವಿಚ್ಛೇದನ ಅರ್ಜಿಯ ಗುಟ್ಟು ರಟ್ಟು

ಪಾಟ್ನಾ: ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಶುಕ್ರವಾರ ವಿಚ್ಛೇದನ ಕೋರಿ ಪಾಟ್ನಾ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ ಮೊದಲ ವಾರದಿಂದಲೇ ಐಶ್ವರ್ಯ ಮತ್ತು ತೇಜ್ ಪ್ರತಾಪ್ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು ಎಂದು ಹೇಳಲಾಗುತ್ತಿದೆ.

ವಿಚ್ಛೇದನಕ್ಕೆ ಕಾರಣವೇನು?
ಐಶ್ವರ್ಯ 2019ರ ಚುನಾವಣೆಗೆ ತಮ್ಮ ತಂದೆ ಚಂದ್ರಿಕಾ ರಾಯ್ ಅವರಿಗೆ ಛಪರಾ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂದು ಪತಿ ತೇಜ್ ಪ್ರತಾಪ್ ಮೇಲೆ ಒತ್ತಡ ಹಾಕುತ್ತಿದ್ದರಂತೆ. ತನ್ನ ತಂದೆಗೆ ಟಿಕೆಟ್ ನೀಡಬೇಕೆಂದು ಐಶ್ವರ್ಯ ಪತಿಯೊಂದಿಗೆ ಹಲವು ಬಾರಿ ಜಗಳ ಮಾಡಿಕೊಂಡಿದ್ದರು. ನಿಮ್ಮನ್ನು ಮದುವೆ ಆದ್ರೂ ನಾನು ತಂದೆಗೆ ಟಿಕೆಟ್ ಕೊಡಿಸಿದೆ ಇದ್ರೆ ಏನು ಪ್ರಯೋಜನ ಎಂದು ಹಲವು ಬಾರಿ ಗಲಾಟೆ ಮಾಡುತ್ತಿದ್ದಳು ಎಂದು ವಿಚ್ಛೇದನದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮದುವೆಯಾದ ಬಳಿಕ ಮೇ 12ರಿಂದ ಸೆಪ್ಟೆಂಬರ್ 1ರವರೆಗೆ ಇಬ್ಬರ ದಾಂಪತ್ಯದಲ್ಲಿ ಸದಾ ಗಲಾಟೆ ನಡೆಯುತ್ತಿತ್ತು. ದೆಹಲಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿರುವ ಐಶ್ವರ್ಯ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದಳು. ನಾನು ಭಜನೆ-ಕೀರ್ತನೆಗಳನ್ನು ಕೇಳಿದ್ರೆ, ಆಕೆ ವೆಸ್ಟರ್ನ್ ಹಾಡುಗಳನ್ನು ಇಷ್ಟಪಡುತ್ತಿದ್ದಳು. ಇಬ್ಬರ ಅಭಿರುಚಿಗಳು ಬೇರೆ ಬೇರೆಯಾಗಿದ್ದು, ಸಂಸಾರದಲ್ಲಿ ಹೊಂದಾಣಿಕೆಯೇ ಇರಲಿಲ್ಲ. ಒಮ್ಮೆ ನನ್ನ ಹಿರಿಯ ಸೋದರಿ ಮೀಸಾ ಭಾರತಿ ಸಲಹೆ ನೀಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಎಲ್ಲರ ಮೇಲೆ ಕೋಪಗೊಂಡಿದ್ದಳು ಎಂದು ತೇಜ್ ಪ್ರತಾಪ್ ಪತ್ನಿಯ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.

ಐಶ್ವರ್ಯ ನನ್ನ ಮತ್ತು ಸೋದರನ ನಡುವೆ ಇಬ್ಬರ ಮಧ್ಯೆ ಜಗಳ ತಂದಿಡುವ ಪ್ರಯತ್ನ ಮಾಡುತ್ತಿದ್ದಳು. ಪ್ರತಿ ಬಾರಿಯೂ ನಮ್ಮ ಕುಟುಂಬಸ್ಥರನ್ನು ಅವಮಾನಿಸುತ್ತಿದ್ದಳು. ನಮ್ಮ ತಂದೆ ಮುಂಬೈನ ಅಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ನಾವಿಬ್ಬರೂ ತಾಜ್ ಹೋಟೆಲ್ ನಲ್ಲಿ ಉಳಿದುಕೊಂಡಾಗ ಅಲ್ಲಿಯೂ ತಂದೆಗೆ ಟಿಕೆಟ್ ನೀಡಬೇಕೆಂದು ಕ್ಯಾತೆ ತೆಗೆದಿದ್ದಳು.

ಜೂನ್ 9 ಮತ್ತು 11ರಂದು ಇಬ್ಬರ ಮಧ್ಯೆ ಜಗಳ ನಡೆದಾಗ ನನ್ನ ಮೇಲೆ ನೀರು ಎರಚಿ ಹಲ್ಲೆಗೆ ಮುಂದಾಗಿದ್ದಳು. ಐಶ್ವರ್ಯ ನಮ್ಮ ಕುಟುಂಬಸ್ಥರ ಮೇಲೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಮರ್ಯಾದೆಯನ್ನು ಹರಾಜು ಹಾಕ್ತೀನಿ. ಪಾಟ್ನಾ ಹೈ ಕೋರ್ಟ್ ನಲ್ಲಿ ನನ್ನ ಸೋದರ ವಕೀಲನಾಗಿದ್ದಾನೆ ಎಂದು ನಮಗೆ ಬೆದರಿಕೆ ಹಾಕುತ್ತಿದ್ದಳು ಎಂದು ತೇಜ್ ಪ್ರತಾಪ್ ಯಾದವ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *