ಮುಂಬೈ: ಬಾಲಿವುಡ್‍ನ ನೀಲಿ ಕಂಗಳ ಸುಂದರಿ ಐಶ್ವರ್ಯ ರೈ ಬಚ್ಚನ್ `ಸರಬ್ಜಿತ್’ ಚಿತ್ರದ ನಟನೆಗಾಗಿ ಶನಿವಾರ ಸಿನಿಮಾ ಲೋಕದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಐಶ್ವರ್ಯಾರ ಸೌಂದರ್ಯತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಒಮಂಗ್ ಕುಮಾರ್ ನಿರ್ದೇಶನದ ಸರಬ್ಜಿತ್ ಸಿನಿಮಾದಲ್ಲಿ ಐಶ್ವರ್ಯ, ದಲ್ಬೀರ್ ಕೌರ್ ಆಗಿ ಕಾಣಿಸಿಕೊಂಡಿದ್ದರು. ರಣ್ ದೀಪ್ ಹೂಡಾ ಚಿತ್ರದಲ್ಲಿ ಸರಬ್ಜಿತ್ ಪಾತ್ರದಲ್ಲಿ ನಟಿಸಿದ್ರು. ಚಿತ್ರದ ಐಶ್ವರ್ಯ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
2016 ರಲ್ಲಿ ಐಶ್ವರ್ಯ ರೈ ನಟನೆಯ `ಏ ದಿಲ್ ಹೈ ಮುಷ್ಕಿಲ್’ ಚಿತ್ರ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿತ್ತು. ಚಿತ್ರದಲ್ಲಿ ರಣ್‍ಬೀರ್ ಕಪೂರ್, ಅನುಷ್ಕಾ ಶರ್ಮಾ ನಟಿಸಿದ್ದರು. ಏ ದಿಲ್ ಹೈ ಮುಷ್ಕಿಲ್ ಬಾಕ್ಸ್ ಆಫೀಸ್‍ನಲ್ಲಿ ನೂರು ಕೋಟಿಗೂ ಅಧಿಕ ಹಣವನ್ನು ಗಳಿಸಿತ್ತು.







Leave a Reply