Air India Caseː ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ ಬೇಲ್

ನವದೆಹಲಿ: 2022ರ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ (Air India) ವಿಮಾನದಲ್ಲಿ ತನ್ನ ಸಹ ಪ್ರಯಾಣಿಕ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಂಕರ್ ಮಿಶ್ರಾಗೆ (Shankar Mishra) ದೆಹಲಿ ನ್ಯಾಯಾಲಯವು (Delhi Court) ಜಾಮೀನು ಮಂಜೂರು ಮಾಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (Sessions Judge) ಹರ್ಜ್ಯೋತ್ ಸಿಂಗ್ ಭಲ್ಲಾ ಅವರು ಮಿಶ್ರಾಗೆ 1 ಲಕ್ಷ ರೂ. ಜಾಮೀನು ಬಾಂಡ್ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ. ಇದನ್ನೂ ಓದಿ: 2013ರ ರೇಪ್‌ಕೇಸ್‌: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

ಈ ತಿಂಗಳ ಆರಂಭದಲ್ಲಿ ಎಂಎಂ ನ್ಯಾಯಾಲಯ (MM Court), ಆರೋಪಿ ಮಿಶ್ರಾಗೆ ಜಾಮೀನು ನಿರಾಕರಿಸಿತ್ತು. ಮಹಿಳೆಯ ದೂರಿನ ಹೊರತಾಗಿ ಆರೋಪಿ ಮಿಶ್ರಾ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಕ್ರಮವು ಅತ್ಯಂತ ಅಸಹ್ಯಕರ ಎಂದು ಜಾಮೀನು ನಿರಾಕರಿಸಿತ್ತು. ಇದೀಗ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಇತ್ತೀಚೆಗಷ್ಟೇ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡಿಜಿಸಿಎ (DGCA), ಏರ್ ಇಂಡಿಯಾ ಕಂಪನಿಗೆ 30 ಲಕ್ಷ ರೂ. ದಂಡ ವಿಧಿಸಿತ್ತು. ಅಂದು ವಿಮಾನದ ವಾಚ್‌ಡಾಗ್ (ವಿಚಕ್ಷಣಾ ವಿಭಾಗ) ತನ್ನ ಕರ್ತವ್ಯ ನಿರ್ವಹಿಸಲು ವಿಫಲವಾದ ಕಾರಣಕ್ಕೆ ಏರ್ ಇಂಡಿಯಾದ ಇನ್-ಫ್ಲೈಟ್‌ ಸೇವೆಗಳ ನಿರ್ದೇಶಕರ ಮೇಲೂ 3 ಲಕ್ಷ ರೂ. ದಂಡ ವಿಧಿಸಿತ್ತು.

ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

ಏನಿದು ಘಟನೆ?
ನ್ಯೂಯಾರ್ಕ್ ನಿಂದ ದೆಹಲಿಗೆ ನ.26 ರಂದು ಏರ್ ಇಂಡಿಯಾ ವಿಮಾನ AI-102 ಸಂಚರಿಸುತ್ತಿತ್ತು. ಈ ವಿಮಾನದಲ್ಲಿ ಬಿಸಿನೆಸ್ ಕ್ಲಾಸ್‌ನಲ್ಲಿ ಸಂಚರಿಸುತ್ತಿದ್ದ ಪುರುಷ ಪ್ರಯಾಣಿಕರೊಬ್ಬರು ಕುಡಿದ ಮತ್ತಿನಲ್ಲಿ, ಸಹಪ್ರಯಾಣಿಕರಾಗಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದರು. ಇದನ್ನೂ ಓದಿ: ಮೂತ್ರ ವಿಸರ್ಜನೆ ಕೇಸ್‌ನಲ್ಲಿ ಪೈಲಟ್‌ ಬಲಿಪಶು – ಏರ್‌ ಇಂಡಿಯಾ ಪೈಲಟ್‌ ಒಕ್ಕೂಟ

ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

ಮೂತ್ರದಿಂದ ಮಹಿಳೆಯ ಬಟ್ಟೆ, ಶೂ, ಬ್ಯಾಗ್ ಒದ್ದೆಯಾಗಿತ್ತು. ಬ್ಯಾಗ್‌ನಲ್ಲಿ ಅಮೆರಿಕನ್ ಕರೆನ್ಸಿ, ಪಾಸ್‌ಪೋರ್ಟ್ ಸೇರಿ ಮುಖ್ಯವಾದ ದಾಖಲೆಗಳಿದ್ದವು. ಏರ್ ಹೋಸ್ಟೆಸ್ ಕೂಡಾ ಇದನ್ನು ಮುಟ್ಟಲು ನಿರಾಕರಿಸಿದ್ರು. ಬಳಿಕ ಮಹಿಳೆಯನ್ನು ಬಾತ್‌ರೂಂಗೆ ಕರೆದುಕೊಂಡು ಹೋಗಿ ಬೇರೆ ಬಟ್ಟೆ ನೀಡಿದ್ರು. ನಂತರ ಬೇರೆ ಸೀಟ್ ಕೊಡುವಂತೆ ಮಹಿಳೆ ಕೇಳಿಕೊಂಡಿದ್ದರು. ಈ ವೇಳೆ ಸೀಟ್‌ಗಳೆಲ್ಲಾ ಭರ್ತಿಯಾಗಿದೆ ಎಂದು ಸಿಬ್ಬಂದಿ, ಏರ್ ಹೋಸ್ಟೆಸ್ ಪ್ರಯಾಣ ಮಾಡುವ ಸೀಟ್ ನೀಡಿ ದೆಹಲಿಗೆ ಕರೆದುಕೊಂಡು ಬಂದಿದ್ದರು. ನಂತರ ಏರ್ ಇಂಡಿಯಾ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

ಈ ಪ್ರಕರಣದ ತನಿಖೆ ವೇಳೆ ಆಕೆಯೇ ತನ್ನ ಮೇಲೆ ಮೂತ್ರ ಮಾಡಿಕೊಂಡಿದ್ದಳು ಎಂದು ಶಂಕರ್ ಮಿಶ್ರಾ ಪರ ವಕೀಲರು ವಾದಿಸಿದ್ದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Comments

Leave a Reply

Your email address will not be published. Required fields are marked *